Slide
Slide
Slide
previous arrow
next arrow

ವುಶು ಚಾಂಪಿಯನ್‌ಶಿಪ್: ಹೊನ್ನಾವರದ ಧನ್ವಿ ರಾಷ್ಟ್ರಮಟ್ಟಕ್ಕೆ

300x250 AD

ಹೊನ್ನಾವರ: ಕೊಯಿಮತ್ತೂರಿನ KPR Institute of Engineering and Technologyಯ ಸ್ಟೇಡಿಯಂನಲ್ಲಿ ನಡೆದ ಖೇಲೋ ಇಂಡಿಯಾ ವುಮೆನ್ಸ್ ವುಶೋ ಲೀಗ್ ಸೌತ್ ಜೋನ್ ನ ಸಬ್ ಜೂನಿಯರ್ ಶಾನ್ಸು(ಫೈಟ್ ಕ್ರೀಡೆಯ 27 ಕೆಜಿ ವಿಭಾಗದಲ್ಲಿ ಹೊನ್ನಾವರದ ಧನ್ವಿ ಕುಮಾರ್ ನಾಯಕ್ ಬೆಳ್ಳಿ ಪದಕ ಪಡೆದು ಮಾರ್ಚ್ ನಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ.

ಇವಳು ಹೊನ್ನಾವರದ ರಾಯಲ್ ಅಕಾಡೆಮಿಯಲ್ಲಿ ಉತ್ತರ ಕನ್ನಡ ಜಿಲ್ಲಾ ವಿಶ್ವ ಅಸೋಸಿಯೇಷನ್ ಜನರಲ್ ಸೆಕ್ರೆಟರಿ ಆದ ರಾಘವೇಂದ್ರ ಆರ್ ಹೊನ್ನಾವರ ಬಳಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದು, ಪ್ರಸ್ತುತ ಹೊನ್ನಾವರದ ಮಾರ್ಥೆಮಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರನೇ ತರಗತಿಯನ್ನು ಓದುತ್ತಿದ್ದಾಳೆ. ಈಕೆ ಕುಮಟಾದ ಕೋಡ್ಕಣಿ ಗ್ರಾಮದ ಕುಮಾರ್ ರಾಮ ನಾಯ್ಕ್ ಹಾಗೂ ಸುವರ್ಣ ನಾಯ್ಕ್ ಇವರ ಪುತ್ರಿಯಾಗಿದ್ದಾಳೆ. ಇವಳ ಸಾಧನೆಗೆ ಪಾಲಕರು ಊರ ನಾಗರಿಕರು ಉತ್ತರ ಕನ್ನಡ ಜಿಲ್ಲಾ ವುಷು ಅಸೋಸಿಯೇಷನ್ ಜನೆರಲ್ ಸೆಕ್ರೆಟರಿ ರಾಜ್ಯ ತರಬೇತುದಾರ ಮತ್ತು ರಾಷ್ಟ್ರೀಯ ತೀರ್ಪುಗಾರರಾದ ರಾಘವೇಂದ್ರ ಆರ್. ಮತ್ತು ಜಿಲ್ಲೆಯ ವುಶು ಅಸೋಸಿಯೇಷನ್ ಅಧ್ಯಕ್ಷ ಸತ್ಯ ಜಾವಗಲ್ ಹರ್ಷ ವ್ಯಕ್ತಪಡಿಸಿ ಹಾರೈಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top