Slide
Slide
Slide
previous arrow
next arrow

ಜ.27ರಿಂದ ‘ಮೈತ್ರಿ ಕಲಾಬಳಗ ರಜತ ಮಹೋತ್ಸವ’

300x250 AD

ಯಲ್ಲಾಪುರ:  ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಜಿಲ್ಲೆಯಾದ್ಯಂತ ಪ್ರಸಿದ್ಧಿ ಹೊಂದಿರುವ ತಾಲೂಕಿನ ತೇಲಂಗಾರಿನ ಮೈತ್ರಿ ಕಲಾ ಬಳಗ ರಜತ ಮಹೋತ್ಸವದ ಸಂಭ್ರಮದಲ್ಲಿದೆ. ಬಳಗದ ರಜತ ಮಹೋತ್ಸವ ಜ.27 ರಿಂದ 29 ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದ್ದು, ಸಿದ್ಧತೆಗಳು ಭರದಿಂದ ನಡೆಯುತ್ತಿವೆ.

ಗ್ರಾಮೀಣ ಭಾಗದಲ್ಲಿ ನಿರಂತರವಾಗಿ ಕಾರ್ಯಕ್ರಮಗಳ ಮೂಲಕ ಸಾಂಸ್ಕೃತಿಕ ವಾತಾವರಣವನ್ನು ಕಾಯ್ದಿಟ್ಟುಕೊಂಡು ಬಂದ ಬಳಗದ ಕಾರ್ಯ ಸ್ತುತ್ಯಾರ್ಹವಾದದ್ದು. ಯಕ್ಷಗಾನ, ತಾಳಮದ್ದಲೆ ಸಪ್ತಾಹ, ಜಾನಪದ ಕಲಾ ಪ್ರದರ್ಶನ, ಕೋಲಾಟ, ಸಂಗ್ಯಾ ಬಾಳ್ಯಾ, ಸಂಗೀತ, ಭರತನಾಟ್ಯ ಅನೇಕ ಪ್ರಕಾರಗಳ‌ ಕಲಾ ಪ್ರದರ್ಶನಗಳನ್ನು ಬಳಗ ಆಯೋಜಿಸಿದೆ. ಸ್ಥಳೀಯ ಪ್ರತಿಭೆಗಳಿಗೆ ವೇದಿಕೆಯಾಗಿ, ಅವರನ್ನು ಪ್ರೋತ್ಸಾಹಿಸಿ, ಬೆಳೆಸುವ ಜೊತೆಗೆ, ಸಿದ್ಧ-ಪ್ರಸಿದ್ಧರ ಕಲಾ ನೈಪುಣ್ಯತೆಗೂ ಅಷ್ಟೇ ಮನ್ನಣೆ ನೀಡಿದೆ. ಸಾಹಿತ್ಯ, ವಿಚಾರ ಗೋಷ್ಠಿಗಳು, ಪುಸ್ತಕ ಲೋಕಾರ್ಪಣೆ, ಕವಿಗೋಷ್ಠಿಯಂತಹ ಸಾಹಿತ್ಯಿಕ ಕಾರ್ಯಕ್ರಮಗಳನ್ನೂ ಬಳಗ ನಡೆಸಿದೆ. ಬಳಗವು ಊರಿನ ಉತ್ಸಾಹಿಗಳ ನೆರವಿನಿಂದ ಸ್ವಂತ ಕಟ್ಟಡ ನಿರ್ಮಿಸಿ, ಸಾರ್ವಜನಿಕ ಗ್ರಂಥಾಲಯ ಸ್ಥಾಪಿಸಿ ತನ್ಮೂಲಕ ಅನೇಕ ಓದುಗರಿಗೆ ಅನುಕೂಲ ಮಾಡಿಕೊಟ್ಟಿದೆ. ಕಲಾ ಶಿಬಿರಗಳು, ಯಕ್ಷಗಾನ ತರಗತಿ, ಕಮ್ಮಟಗಳ ಮೂಲಕ ಕಲಾಸಕ್ತರಿಗೆ ಕಲೆಯ ಕಲಿಕೆಗೂ ಅವಕಾಶ ಒದಗಿಸಿದ್ದು ಬಳಗದ ಹೆಗ್ಗಳಿಕೆ. ವಿವಿಧ ಆಯಾಮಗಳಲ್ಲಿ ಸದಾ ಕ್ರಿಯಾಶೀಲತೆಯಿಂದ ಕೂಡಿದ ಮೈತ್ರಿ ಕಲಾ ಬಳಗಕ್ಕೀಗ 25 ರ ಹರೆಯ.

ಜನವರಿ 27 ರಿಂದ 29 ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಮೈತ್ರಿ ಬೆಳ್ಳಿ ಹಬ್ಬ ನಡೆಯಲಿದೆ. ಜ.27 ರಂದು ಸಂಜೆ 4.30 ಕ್ಕೆ ಮೈತ್ರಿ ಬೆಳ್ಳಿ ಹಬ್ಬವನ್ನು ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟಿಸಲಿದ್ದು, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಕಾವ್ಯ ಗಾಯನ, ಕುಂಚನೃತ್ಯ, ಜಾನಪದ ಸಂಗೀತ, ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಜ.28 ರಂದು ಮಧ್ಯಾಹ್ನ 3.30ಕ್ಕೆ ಗೀತ ಸಂಗಮ, ಸನ್ಮಾನ, ಪುರಸ್ಕಾರ, ಮಾತೃಮಂಡಳಿಯ ಸದಸ್ಯರಿಂದ ಕೃಷ್ಣ ಸಂಧಾನ ತಾಳಮದ್ದಲೆ, ಭರತನಾಟ್ಯ, ಸಪ್ತಸ್ವರ ಸೇವಾ ಸಂಸ್ಥೆಯ ಮಹಿಳಾ ಕಲಾವಿದರಿಂದ ಶಶಿಪ್ರಭಾ ಪರಿಣಯ ಯಕ್ಷಗಾನ ಪ್ರದರ್ಶನ ನಡೆಯಲಿದೆ.
   ಜ.29 ರಂದು ಬೆಳಗ್ಗೆ 10 ಕ್ಕೆ ಕನ್ನಡ ಸುದ್ದಿ ಮಾಧ್ಯಮಗಳು ಹಾಗೂ ಸವಾಲುಗಳು ಕುರಿತು ಗೋಷ್ಠಿ, ಸಾಹಿತಿ ವನರಾಗ ಶರ್ಮಾ ರಚನೆಯ ಪರ್ವತ ಕಾದಂಬರಿ ಲೋಕಾರ್ಪಣೆ, ಮಹಿಳಾ ವೈಚಾರಿಕ ಗೋಷ್ಠಿ, ಸಮಾರೋಪ ಸಮಾರಂಭ, ಪ್ರಸಿದ್ಧ ಕಲಾವಿದರಿಂದ ಶರಸೇತು ಬಂಧನ, ದ್ರೌಪದಿ ಪ್ರತಾಪ ಯಕ್ಷಗಾನ ಪ್ರದರ್ಶನ ನಡೆಯಲಿದೆ.

300x250 AD
Share This
300x250 AD
300x250 AD
300x250 AD
Back to top