Slide
Slide
Slide
previous arrow
next arrow

ಮುಖ್ಯಮಂತ್ರಿ ಬಂಗಾರ ಪದಕ ಪಡೆದ ಕೆ‌ಎಸ್‌ಆರ್‌ಟಿಸಿ ಚಾಲಕನಿಗೆ ಅಭಿನಂದನೆ

300x250 AD

ಯಲ್ಲಾಪುರ: ಮುಖ್ಯಮಂತ್ರಿ ಬಂಗಾರದ ಪದಕ ಪಡೆದ ಕೆಎಸ್‌ಆರ್‌ಟಿಸಿ ಚಾಲಕ ಎಸ್.ಎ. ಜವಳಿ ಅವರನ್ನು ಪಟ್ಟಣದ ಬಸ್ ಘಟಕದಲ್ಲಿ ಸಾರಿಗೆ ಸಿಬ್ಬಂದಿ ವರ್ಗ ಹಾಗೂ ಎಸ್‌ಸಿ ಎಸ್‌ಟಿ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಬುಧವಾರ ಸಂಜೆ ನಡೆದ ಚಾಲನಾ ದಿನಾಚರಣೆಯ ಸಂದರ್ಭದಲ್ಲಿ ಸನ್ಮಾನಿಸಿ ಅಭಿನಂಧಿಸಲಾಯಿತು.

ಘಟಕ ವ್ಯವಸ್ಥಾಪಕ ಸಂತೋಷ ವೆರ್ಣೆಕರ್ ಎಸ್.ಎ. ಜವಳಿ ಅವರನ್ನು ಗೌರವಿಸಿದರು. ಘಟಕದ ಉಸ್ತುವಾರಿ ಅಧಿಕಾರಿ ಎ.ಎಂ. ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು. ಎಸ್.ಸಿ ಎಸ್‌ಟಿ ಕ್ಷೇಮಾಭಿವೃದ್ಧಿ ಸಂಘದ ವಿಭಾಗದ ಪ್ರಧಾನ ಕಾರ್ಯದರ್ಶಿ ರಾಜೇಶ ಎನ್. ಪಾಟಣಕರ್ ನಿರೂಪಿಸಿದರು. ಸೈಪನ್ ಸ್ವಾತಿಸಿದರು. ತಿಪ್ಪೇಸ್ವಾಮಿ ವಂದಿಸಿದರು. ಇದಕ್ಕೂ ಪೂರ್ವದಲ್ಲಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಮೂಲಕ ಚಾಲನಾ ಸಿಬ್ಬಂದಿಗಳಿಗೆ ಪುಷ್ಪ ನೀಡಿ ಚಾಲನಾ ದಿನಾಚರಣೆಯ ಶುಭ ಕೋರಲಾಯಿತು.

300x250 AD
Share This
300x250 AD
300x250 AD
300x250 AD
Back to top