ಕುಮಟಾ: ಚೇತನ್ ಸೇವಾ ಸಂಸ್ಥೆ ದಿವಗಿ ಆಶ್ರಯದಲ್ಲಿ ಸಾಮಾಜಿಕ ಹಿತಚಿಂತಕರು ದಿ.ಶಿವು ಗೌಡರ ಸ್ಮರಣಾರ್ಥ ಸಾಂಸ್ಕೃತಿಕ ಸಂಜೆ ಹಾಗೂ ಶೈಕ್ಷಣಿಕವಾಗಿ ವಿಶೇಷ ಸೇವೆ ಸಲ್ಲಿಸಿದ ಮುಖ್ಯಶಿಕ್ಷಕಿ ಕೆ.ಡಿ.ಪೈ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಖ್ಯಾತ ಉದ್ದಿಮೆದಾರ ಹಾಗೂ ಕಾಂಗ್ರೆಸ್ ಮುಖಂಡರೂ ಆದ ಮಂಜುನಾಥ ಎಲ್. ನಾಯ್ಕ ಮಾತನಾಡಿ ದಿ.ಶಿವು ಗೌಡ ಸ್ಮರಣಾರ್ಥ ಹಮ್ಮಿಕೊಂಡ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಹಾಗೂ ಶಾಲಾಭಿವೃದ್ಧಿಗಾಗಿ ವಿಶೇಷ ಸೇವೆ ಸಲ್ಲಿಸಿದ ಮುಖ್ಯ ಶಿಕ್ಷಕಿ ಕೆ.ಡಿ.ಪೈರವರಿಗೆ ಸನ್ಮಾನ ಮಾಡಿ ಗೌರವಿಸಿದ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಹಾಗೂ ಬಿಜೆಪಿ ಮುಂಖಡರು ಶಿವಾನಂದ ಹೆಗಡೆ ಕಡತೋಕಾ ಸಮಾಜವನ್ನು ನಿರ್ಮಾಣ ಮಾಡುವ ಸೈನಿಕರೆಂದರೆ ಶಿಕ್ಷಕರು. ಹಿಂದೆ ಗುರುಕುಲದಿಂದಲೇ ಪ್ರಾರಂಭವಾದ ಶಿಕ್ಷಣದಿಂದ ಇಂದು ನಮ್ಮ ಭಾರತೀಯ ಸಂಸ್ಕೃತಿಯನ್ನು ಇಡೀ ವಿಶ್ವವೇ ಒಪ್ಪಿಕೊಳ್ಳುತ್ತದೆ ಎಂದು ಶೈಕ್ಷಣಿಕ ಸೇವೆ ಸಲ್ಲಿಸಿದವರಿಗೆ ಸನ್ಮಾನ ಮಾಡಿರುವುದಕ್ಕಾಗಿ ಹರ್ಷ ವ್ಯಕ್ತಪಡಿಸಿ ಮಾತನಾಡಿದರು.
ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ನಾಯಕ ರಚನಾತ್ಮಕ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಸಂಸ್ಥೆಯ ಕಾರ್ಯವೈಖರಿ ಕುರಿತಾಗಿ ಶ್ಲಾಘಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ದೀವಗಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಬೀರಮ್ಮಾ ಜೋಗಿ ಗೌಡ, ಯುವ ಮುಖಂಡ ಜನಾರ್ಧನ ಗೌಡ, ಎಸ್.ಡಿ.ಎಮ್.ಸಿ ಅಧ್ಯಕ್ಷ ಸುರೇಶ ಗೌಡ, ಚೇತನಾ ಸೇವಾ ಸಂಸ್ಥೆಯ ಅಧ್ಯಕ್ಷ ಆರ್.ಕೆ. ಅಂಬಿಗ, ಪ್ರಭಾಕರ ಹೆಗಡೆಕರ್, ರವಿ ಅಂಬಿಗ ಧಾರೇಶ್ವರ ಹಾಗೂ ಊರನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ನಂತರ ಸ್ಥಳೀಯ ಮಕ್ಕಳಿಂದ ಹಾಗೂ ಹೊರಗಿನ ಕಲಾವಿದರಿಂದ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸುಂದರವಾಗಿ ಮೂಡಿ ಬಂದವು.