Slide
Slide
Slide
previous arrow
next arrow

ಫೆ.9ರಿಂದ ‘ಕಾರ್ಮಿಕರ ಹಬ್ಬ-2024’

300x250 AD

ಕುಮಟಾ: ಉತ್ತರ ಕನ್ನಡ ಜಿಲ್ಲಾ ಶ್ರಮಜೀವಿ ಕಟ್ಟಡ ಮತ್ತು ಇತರೆ ನಿರ್ಮಾಣ ಹಾಗೂ ಅಸಂಘಟಿತ ಕಾರ್ಮಿಕರ ಸಂಘ ಕುಮಟಾ ಇವರ ಆಶ್ರಯದಲ್ಲಿ ‘ಕಾರ್ಮಿಕರ ಹಬ್ಬ-2024′ ಪಟ್ಟಣದ ಮಣಕಿ ಮೈದಾನದಲ್ಲಿ ಫೆ.9 ರಿಂದ 13ರವರೆಗೆ ಆಚರಿಸಲಿದ್ದೇವೆ’ ಎಂದು ಕಾರ್ಮಿಕ ಮುಖಂಡ ಮಂಜು ಜೈನ ತಿಳಿಸಿದರು.

ಪಟ್ಟಣದ ಪ್ರವಾಸೀ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಪ್ರಪ್ರಥಮ ಬಾರಿಗೆ ನಡೆಯುತ್ತಿರುವ ವಿಶೇಷ ಕಾರ್ಮಿಕರ ಹಬ್ಬ ಇದಾಗಿದೆ. ಸರ್ಕಾರದಿಂದ ಯಾವುದೇ ಧನಸಹಾಯ ಪಡೆಯದೇ ನಾವೇ ಸಂಘಟಿತರಾಗಿ ಈ ಹಬ್ಬವನ್ನು ಆಚರಿಸಲು ತೀರ್ಮಾನಿಸಿದ್ದೇವೆ. ಕಾರ್ಮಿಕರ ದಣಿದ ಜೀವಕ್ಕೆ 5 ದಿನಗಳ ಕಾಲ ಮನೊರಂಜನೆಯ ರಸದೌತಣ ನೀಡಲಿದ್ದೇವೆ. ಹಬ್ಬದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಮಳಿಗೆಗಳು, ಅಮ್ಯೂಸ್‍ಮೆಂಟ್ ಪಾರ್ಕ್, ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಸನ್ಮಾನ, ಕಾರ್ಮಿಕರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಲಿದ್ದೇವೆ ಎಂದರು.

300x250 AD

ಶಾಂತಿಕಾಂಬಾ ಕಲಾ ಡ್ಯಾನ್ಸ್ ಕೊರಿಯೋಗ್ರಾಫರ್ ವಿಶ್ವನಾಥ ಗುನಗಾ ಮಾತನಾಡಿ, ಜನವರಿ 28 ರಂದು ಕಾರ್ಮಿಕರ ಹಬ್ಬದ ನಿಮಿತ್ತ ನಡೆಸಲು ಉದ್ದೇಶಿಸಿರುವ ಡ್ಯಾನ್ಸ್ ಕಾರ್ಯಕ್ರಮಗಳ ಆಡಿಶನ್ ಪಟ್ಟಣದ ಹಳೇ ಮೀನು ಮಾರ್ಕೆಟ್ ಹತ್ತಿರದ ಪುರಭವನದಲ್ಲಿ ನಡೆಯಲಿದೆ. ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮಕ್ಕಳಿಗೆ ಮುಕ್ತ ಡ್ಯಾನ್ಸ್, ಗ್ರೂಪ್ ಡ್ಯಾನ್ಸನಲ್ಲಿ ಜೂನೀಯರ ಮತ್ತು ಸೀನಿಯರ ವಿಭಾಗಗಳಿರುತ್ತವೆ. ಅಲ್ಲದೆ ಯುವತಿಯರು ಮತ್ತು ಯುವಕರಿಗೆ ಮಾಡಲಿಂಗ್ ಸ್ಪರ್ಧೆ ಆಯೋಜಿಸಲಾಗುವದು. ಇದಕ್ಕೆ ಆಡಿಶನ್ ನಡೆಯುವುದಿಲ್ಲ ಎಂದು ತಿಳಿಸಿದರು. ಆಡಿಶನ್‍ಗೆ ಬರುವ ಆಸಕ್ತರು tel:+918277609370, tel:+919945948638ಗೆ ಸಂಪರ್ಕಿಸಬೇಕು ಎಂದರು. ಈ ಸಂದರ್ಭದಲ್ಲಿ ಪ್ರಮುಖರಾದ ಚಂದ್ರಶೇಖರ ಪಾಲೆಕರ, ಭಾಸ್ಕರ, ರವೂಫ, ಅಕ್ರಮ, ಮಂಗಲಾ ಜೈನ, ಅಮಿತ, ನವಾಜ, ದಿನೇಶ, ರಾಜೇಶ ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top