Slide
Slide
Slide
previous arrow
next arrow

ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಆಹ್ವಾನಿಸಿಲ್ಲ: ಅರುಣ್ ದೇಸಾಯಿ ಆರೋಪ

300x250 AD

ಜೋಯಿಡಾ : ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ್ ವ್ಯಾಪ್ತಿಯ ನಂದಿಗದ್ದಾ ರಂಗಮಂದಿರದಲ್ಲಿ ಕೇಂದ್ರ ಸರ್ಕಾರ ಮತ್ತು ಸ್ವಹಾಯ ಸಂಘ ನಂದಿಗದ್ದೆ ಮತ್ತು ಕೆನರಾ ಬ್ಯಾಂಕ್ ಜೋಯಿಡಾ ಇವರ ಸಹಯೋಗದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ ನಂದಿಗದ್ದಾ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಆಮಂತ್ರಿಸದೇ ಅವಮಾನ ಮಾಡಿದ್ದಾರೆ ಎಂದು ನಂದಿಗದ್ದಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅರುಣ್ ದೇಸಾಯಿ ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ, ಸರ್ಕಾರದ ಕಾರ್ಯಕ್ರಮ ಯಾವುದೇ ನಡೆದರೂ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರಬೇಕಿತ್ತು. ಆದರೆ ಇಲ್ಲಿ ಗ್ರಾಮ ಪಂಚಾಯತ ಗಮನಕ್ಕೆ ತರದೆ ಕಾರ್ಯಕ್ರಮ ಮಾಡಿದ್ದಾರೆ. ಕಾರ್ಯಕ್ರಮ ಗ್ರಾಮ ಪಂಚಾಯ್ತಿಯ ಕೂದಲೆಳೆಯ ಅಂತರದಲ್ಲಿ ನಡೆದರೂ, ಕಾರ್ಯಕ್ರಮಕ್ಕೆ ನಮ್ಮನ್ನು ಕರೆದಿಲ್ಲ. ಸರ್ಕಾರದ ಕಾರ್ಯಕ್ರಮವನ್ನು ಪಕ್ಷದ ಕಾರ್ಯಕ್ರಮದಂತೆ ಮಾಡಿದ್ದಾರೆ. ಹೀಗಾಗಿ ನಮ್ಮನ್ನು ಕಡೆಗಣಿಸಲಾಗಿದೆ‌. ಈ ಬಗ್ಗೆ ಸರಿಯಾದ ಮಾಹಿತಿ ನೀಡಿದರೇ ನಮ್ಮ ಗ್ರಾಮ ಪಂಚಾಯತ ಭಾಗದ ಹೆಚ್ಚಿನ ಜನರನ್ನು ಸೇರಿಸಿ ಜನರಿಗೆ ಈ ಸಂಕಲ್ಪ ಯಾತ್ರೆಯ ಬಗ್ಗೆ ಮಾಹಿತಿ ದೊರೆಯುತ್ತಿತ್ತು ಎಂದು ಅರುಣ್ ದೇಸಾಯಿ ಆರೋಪ ಮಾಡಿದ್ದಾರೆ‌.

300x250 AD
Share This
300x250 AD
300x250 AD
300x250 AD
Back to top