Slide
Slide
Slide
previous arrow
next arrow

ದೇಹಳ್ಳಿ ಸರ್ಕಾರಿ ಶಾಲೆಯ ಸಾಂಸ್ಕೃತಿಕ ಸೌರಭ ದಶಮಾನೋತ್ಸವ

300x250 AD

ಯಲ್ಲಾಪುರ: ಜಿಲ್ಲೆಯಲ್ಲಿ ಮಾದರಿ ಶಾಲೆ ಎನಿಸಿಕೊಂಡ ದೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸಾಂಸ್ಕೃತಿಕ ಸೌರಭ ಕಾರ್ಯಕ್ರಮಕ್ಕೆ ಇದೀಗ ದಶಮಾನೋತ್ಸವದ ಸಂಭ್ರಮ. ಜ.26 ರಂದು ದಶಮಾನೋತ್ಸವದ ಕಾರ್ಯಕ್ರಮ ವಿವಿಧ ವಿಧಾಯಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಕಳೆದ 10 ವರ್ಷಗಳಿಂದ ಜ.26 ರಂದು ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ವಿಭಿನ್ನವಾಗಿ ಸಂಘಟಿಸಿಕೊಂಡು ಬರಲಾಗಿದೆ. ಗಣ್ಯರು, ರಾಜಕೀಯ ಮುಖಂಡರನ್ನು ವೇದಿಕೆಗೆ ಕರೆದು, ಭಾಷಣ ಮಾಡಿಸುವ ಇತರ ಶಾಲೆಗಳ ವಾರ್ಷಿಕೋತ್ಸವಗಳ ಕ್ರಮ ಇಲ್ಲಿಲ್ಲ. ದೇಹಳ್ಳಿಯ ಸಾಂಸ್ಕೃತಿಕ ಸೌರಭದಲ್ಲಿ ಮಕ್ಕಳೇ ಉದ್ಘಾಟಕರು, ಅತಿಥಿಗಳು, ಬಹುಮಾನ ವಿತರಕರು. ಇಡೀ ಕಾರ್ಯಕ್ರಮ ವಿದ್ಯಾರ್ಥಿಗಳಿಂದಲೇ ನಡೆಯುವುದು ಇಲ್ಲಿನ ವಿಶೇಷ.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ, ದೇಶಭಕ್ತಿ ಪ್ರೇರೇಪಿಸುವ ಕಾರ್ಯಕ್ರಮಗಳನ್ನೇ ನೀಡಲಾಗುತ್ತದೆ. ಪಾಲಕರು, ಶಿಕ್ಷಕರು, ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ, ಸ್ಥಳೀಯ ಪಂಚಾಯತ, ಸಹಕಾರಿ ಸಂಘ, ಸಂಘ-ಸಂಸ್ಥೆಗಳು ಎಲ್ಲರ ಒಗ್ಗೂಡುವಿಕೆಯಲ್ಲಿ ಅಪರೂಪದ ಕಾರ್ಯಕ್ರಮ ಪ್ರತಿ ಜನವರಿ 26 ರಂದು ನಡೆಯುತ್ತಿರುವುದು ಮಾದರಿಯಾಗಿದೆ.

ಸಾಂಸ್ಕೃತಿಕ ಸೌರಭ: ದಶಮಾನೋತ್ಸವ: ಈ ಬಾರಿ ದಶಮಾನೋತ್ಸವದ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜ.26 ರಂದು ದೇಹಳ್ಳಿ, ಹಿರಿಯಾಳದ ಮಹಿಳೆಯರಿಗೆ ವಿಶೇಷ ಸ್ಪರ್ಧೆಗಳು, ಮಕ್ಕಳಿಗಾಗಿ ಫುಡ್ ಫೆಸ್ಟ್, ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಕಾರದೊಂದಿಗೆ ಆರೋಗ್ಯ ಶಿಬಿರ, ಯುವಕ ಸಂಘ-ಯುವತಿ ಮಂಡಳಗಳ ಆಶ್ರಯದಲ್ಲಿ ಸ್ವಚ್ಛ ಗ್ರಾಮ-ಸ್ವಾಸ್ಥ್ಯ ಗ್ರಾಮ ಅಭಿಯಾನ, ನಾಗರಿಕ ಸನ್ಮಾನ, ಅಭಿನಂದನೆ, ಪುರಸ್ಕಾರ, ಬಹುಮಾನ ವಿತರಣೆ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

300x250 AD

ಮಾದರಿ ಶಾಲೆ: ದೇಹಳ್ಳಿ ಪ್ರಾಥಮಿಕ ಶಾಲೆ ಎಲ್ಲ ರೀತಿಯ ಸೌಲಭ್ಯಗಳನ್ನು ಹೊಂದಿ, ಗುಣಮಟ್ಟದ ಶಿಕ್ಷಣದ ಮೂಲಕ ತಾಲೂಕು, ಜಿಲ್ಲೆಯಲ್ಲಿ ಉತ್ತಮ ಶಾಲೆ ಎಂಬ ಹೆಸರು ಗಳಿಸಿದೆ. ಶುದ್ಧ ಪರಿಸರ, ಉತ್ತಮ ಉದ್ಯಾನವನ, ಸ್ಮಾರ್ಟ್ ಕ್ಲಾಸ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದು ನಿಂತಿದೆ. 49 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಿಕ್ಷಕರು, ಪಾಲಕರು, ಅಧಿಕಾರಿಗಳು, ಜನಪ್ರತಿನಿಧಿಗಳು ಎಲ್ಲರ ಸಹಭಾಗಿತ್ವ ಇದ್ದಲ್ಲಿ ಸರ್ಕಾರಿ ಶಾಲೆಯ ಯಾವ ಮಟ್ಟಕ್ಕೆ ಮಾದರಿಯಾಗಿ ಬೆಳೆಯಬಹುದು ಎಂಬುದಕ್ಕೆ ದೇಹಳ್ಳಿ ಶಾಲೆ ಉತ್ತಮ ಉದಾಹರಣೆಯಾಗಿದೆ.

Share This
300x250 AD
300x250 AD
300x250 AD
Back to top