Slide
Slide
Slide
previous arrow
next arrow

‘ಸಂಬಂಧಗಳಲ್ಲಿ ಪರಿಶುದ್ಧತೆ,ನಿಸ್ವಾರ್ಥತೆ ಇರುವುದು ಗ್ರಾಮೀಣ ಜೀವನದಲ್ಲಿ’

300x250 AD

ಸಿದ್ದಾಪುರ: ಪರಿಸರ,ಗಾಳಿ,ನೀರು ಮುಂತಾದವುಗಳ ಶುದ್ಧತೆ ಮಾತ್ರವಲ್ಲದೇ ಸಂಬಂಧಗಳಲ್ಲೂ ಪರಿಶುದ್ಧತೆ,ನಿಸ್ವಾರ್ಥ ಗ್ರಾಮೀಣ ಜೀವನದಲ್ಲಿದೆ. ಗ್ರಾಮ್ಯ ಜೀವನದ ಬೇರುಗಳು ಗಟ್ಟಿಯಾಗಿದ್ದರೆ ಎಲ್ಲವೂ ಉಳಿಯುತ್ತದೆ. ಇಂಥ ಬೇರುಗಳು ಈ ಕಾಲದಲ್ಲೂ ಉಳಿದಿದೆ ಎನ್ನುವದನ್ನು ನಿರೂಪಿಸುವಂಥದ್ದು ಇಂಥ ಸಂದರ್ಭಗಳು ಮಾತ್ರ ಎಂದು ಸಾಮಾಜಿಕ ಧುರೀಣ,ಶಿಕ್ಷಣ ಪ್ರಸಾರಕ ಸಮಿತಿ ಉಪಾಧ್ಯಕ್ಷ ಡಾ. ಶಶಿಭೂಷಣ ಹೆಗಡೆ ಹೇಳಿದರು.

ಅವರು ತಾಲೂಕಿನ ನೇರಲಮನೆಯ ಸ್ವಾತಂತ್ರ ವೀರ ಸೇನಾನಿ ದಿ. ನಾಗೇಶ ಹೆಗಡೆ ವೇದಿಕೆಯಲ್ಲಿ ನೇರಲಮನೆ ಕುಟುಂಬ ಆಯೋಜಿಸಿದ ಅಗಳಗದ್ದೆ ಮಂಜುನಾಥ ಗೌಡ ದಂಪತಿಗಳ ಹಾಗೂ ಯಕ್ಷಗಾನ ಕಲಾವಿದ, ರೈತ ಹೋರಾಟಗಾರ ಪಿ.ವಿ.ಹೆಗಡೆ ಹೊಸಗದ್ದೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರ ದಿ. ನಾಗೇಶ ಹೆಗಡೆ ಸ್ವಾತಂತ್ರ್ಯ ಹೋರಾಟದಲ್ಲಿ ಆಸ್ತಿಪಾಸ್ತಿಗಳನ್ನೆಲ್ಲ ಕಳೆದುಕೊಂಡ ಸಂದರ್ಭದಲ್ಲಿ ಅವರಿಗೆ ಉಚಿತವಾಗಿ ಭೂಮಿ ಮತ್ತು ಅದರ ನಿರ್ವಹಣೆಗೆ ಆ ಕಾಲದ 2 ಸಾವಿರ ರೂ.ಗಳನ್ನು ನೀಡಿದ ಕುಟುಂಬ ಅಗಳಗದ್ದೆ ಬಿಳಿಯಾ ಗೌಡರದ್ದು. ನಾಗೇಶ ಹೆಗಡೆಯವರ ಕುಟುಂಬ ಇಂದು ವಿಸ್ತೃತವಾಗಿ ಬೆಳೆದುಬಂದಿದೆ. ಆ ಕುಟುಂಬದ ಜೊತೆ ಹಲವು ದಶಕಗಳಿಂದ ಮಾನವೀಯ ಸ್ನೇಹ,ಸಂಬಂಧ ಉಳಿಸಿಕೊಂಡು ಬಂದವರು ಪಿ.ವಿ.ಹೆಗಡೆ ಹೊಸಗದ್ದೆ. ತಮ್ಮ ಕುಟುಂಬಕ್ಕೆ ಆಸರೆ ನೀಡಿದ ಅಗಳಗದ್ದೆ ಕುಟುಂಬದ ಈಗಿನ ಮಂಜುನಾಥ ಗೌಡರನ್ನು ಮತ್ತು ಹಿರಿಯರಿಂದ ತೊಡಗಿ ಈವರೆಗೂ ಸೌಹಾರ್ದತೆಯನ್ನು ಉಳಿಸಿಕೊಂಡು ಬಂದ ಪಿ.ವಿ.ಹೆಗಡೆಯವರನ್ನು ಸನ್ಮಾನಿಸುವ ಮೂಲಕ ಸ್ಮರಣೆ,ಸಂಸ್ಮರಣೆ, ಕೃತಜ್ಞತೆಗಳ ಕೊಂಡಿಯನ್ನು ಬೆಸೆದ ಅಪರೂಪದ ಸಂದರ್ಭ ಇದು ಎಂದು ಡಾ. ಶಶಿಭೂಷಣ ಹೆಗಡೆ ಹೇಳಿದರು.

300x250 AD

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಗ್ರಾಮದ ಗಣ್ಯ ಸೀತಾರಾಮ ಹೆಗಡೆ ಹೊಂಡಗಾಸಿ ಪರವಾಗಿ ಅವರ ಪುತ್ರ ನರೇಂದ್ರ ಹೆಗಡೆ ಮಾತನಾಡಿದರು. ಕುಟುಂಬದ ಹಿರಿಯರಾದ ಸುಮಿತ್ರಾ ಹೆಗಡೆ ಹಾಗೂ ನೇರಲಮನೆ ಕುಟುಂಬದ ಸಮಸ್ತರು ಉಪಸ್ಥಿತರಿದ್ದರು. ಸನ್ಮಾನಿತರ ಪರವಾಗಿ ಪಿ.ವಿ.ಹೆಗಡೆ ಹೊಸಗದ್ದೆ ಮಾತನಾಡಿ ನೇರಲಮನೆ ಕುಟುಂಬದ ಜೊತೆಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡರು. ಧೃತಿ ಹೆಗಡೆ ಪ್ರಾರ್ಥನ ಗೀತೆ ಹಾಡಿದಳು. ನಾರಾಯಣ ಹೆಗಡೆ ನೆರಲಮನೆ ಸ್ವಾಗತಿಸಿ,ವಂದಿಸಿದರು. ಆದಿತ್ಯ ಹೆಗಡೆ ನಿರೂಪಿಸಿದರೆ, ಸುಮಂತ ಹೆಗಡೆ, ನಿಧಿ ಹೆಗಡೆ ಪರಿಚಯಿಸಿದರು. ನಂತರ ವಾಲಿ ಮೋಕ್ಷ ಸಮಯಮಿತಿ ಯಕ್ಷಗಾನ ತಾಳಮದ್ದಳೆ ಜರುಗಿತು.

Share This
300x250 AD
300x250 AD
300x250 AD
Back to top