ಹೊನ್ನಾವರ: ಸನಾತನ ಧರ್ಮದಲ್ಲಿ ಜಗತ್ಪಾಲಕ ಶ್ರೀಹರಿಯು ಕೂರ್ಮವತಾರವಾದ ದಿನದಂದು ಹೊನ್ನಾವರದ ಕಾಸರಕೋಡ ಮರಳು ಕಡಲತೀರದಲ್ಲಿ ಮೂರು ಸಮುದ್ರ ಕೂರ್ಮಗಳು ಬಂದು ನೂರಾರು ಮೊಟ್ಟೆ ಇಟ್ಟಿದೆ.
ಕಳೆದ ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರತಿಮೆಯ ಪ್ರಾಣಪ್ರತಿಷ್ಟೆಗೆ ಶ್ರೀಹರಿಯ ದಶಾವತಾರದ ಕೂರ್ಮಾವತಾರದ ಶುಭ ಘಳಿಗೆಯ ಕಾಲವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಸದರಿ ದಿನದಂದು ಕೂರ್ಮಗಳು ತನ್ನ ಅಸ್ತಿತ್ವವನ್ನು ಕಾಸರಕೋಡ ಕಡಲ ತೀರದಲ್ಲಿ ಬಂದು ತೋರಿಸಿ ಶ್ರೀ ರಾಮೋತ್ಸವನ್ನು ಆಚರಿಸಿದೆ. ಸಾಂಪ್ರದಾಯಿಕ ಸಮುದ್ರ ಮೀನುಗಾರ ಮಿತ್ರ ಮತ್ತು ಪೂಜ್ಯನಿಯ ಆರಾಧ್ಯವಾಗಿರುವ ಕಡಲಾಮೆಗಳು ಮರ್ಯಾದಾ ಪುರುಷೋತ್ತಮ ಪ್ರಭು ಸೀತಾರಾಮನ ಪುನಃ ಪ್ರತಿಷ್ಠೆಯಲ್ಲಿ ಪ್ರಕಟಗೊಂಡು ಅನೈತಿಕ ಅಭಿವೃದ್ಧಿಗೆ ಮೂಕ ಕೂರ್ಮಗಳು ಸಮಸ್ಯೆಗಳಲ್ಲ, ಅವು ಒಳ್ಳೆಯ ಕಡಲ ಪರಿಸರಕ್ಕೆ ಸಮಾಧಾನ ಎ೦ದು ತೋರಿಸಿದೆ ಎ೦ದು ಕಾಸರಕೋಡ ಟೊಂಕಾ ಕೊಂಕಣ ಖಾರ್ವಿ ಮೀನುಗಾರ ವಾಡೆಯ ಬುಧವಂತ ರಾದ ರಾಜೇಶ ಗೋವಿಂಧ ತಾಂಡೇಲ ಸರಕಾರಕ್ಕೆ ಈ ಮೂಲಕ ತಿಳಿಸಿದ್ದಾರೆ. ಕೂರ್ಮ ಅವತಾರವಾಗಿ ಬಂದ ದಿನವನ್ನು ಶ್ರೀರಾಮ ಪ್ರಾಣಪ್ರತಿಷ್ಠೆಗೆ ಆಯ್ಕೆ ಮಾಡಿಕೊಂಡದ್ದಕ್ಕಾಗಿ ದೇಶದ ಸಾಧು ಸಂತ ಆಚಾರ್ಯರಿಗೆ ಮತ್ತು ಅಯೋಧ್ಯಾ ಶ್ರೀರಾಮ ಮಂದಿರದ ಆಡಳಿತ ಮಂಡಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.