Slide
Slide
Slide
previous arrow
next arrow

ಬಿ.ಇಡಿ ಫಲಿತಾಂಶ: ವಿಶ್ವದರ್ಶನ ಕಾಲೇಜು ಶೇ.100 ಫಲಿತಾಂಶ

300x250 AD

ಯಲ್ಲಾಪುರ: ಕರ್ನಾಟಕ ವಿಶ್ವವಿದ್ಯಾಲಯದ 2022- 23ನೇ ಸಾಲಿನ ಬಿ.ಇಡಿ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಪಟ್ಟಣದ ವಿಶ್ವದರ್ಶನ ಬಿ.ಇಡಿ ಕಾಲೇಜು ಶೇ. 100 ಫಲಿತಾಂಶ ಸಾಧಿಸಿದೆ. ಕಾಲೇಜಿನ ಒಟ್ಟೂ 95 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿನುತಾ ಮಂಜುನಾಥ ಆಗೇರ ಹಿಲ್ಲೂರು(ವಾಣಿಜ್ಯ ವಿಭಾಗ), ಮುಸ್ಕಾನ್ ಶೇಖ್(ವಾಣಿಜ್ಯ ವಿಭಾಗ) ಶೇ.93 ಅಂಕದೊಂದಿಗೆ ಪ್ರಥಮ ಸ್ಥಾನ, ಜ್ಯೋತಿ ಮಂಜಪ್ಪ ಕೊರವರ(ಕಲಾ ವಿಭಾಗ) ಶೇ.93 ಅಂಕದೊಂದಿಗೆ ದ್ವಿತೀಯ ಸ್ಥಾನ ಹಾಗೂ ಖುರತ್ ಉಲ್ ಐನ್ ( ವಾಣಿಜ್ಯ ವಿಭಾಗ) ಶೇ. 92.83 ಅಂಕದೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ. ಇವರಿಗೆ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು, ಆಡಳಿತ ಮಂಡಳಿ, ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಉಪನ್ಯಾಸಕ ವರ್ಗ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top