ಹೊನ್ನಾವರ : ಒಂದು ಅದ್ಬುತ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿ ನಾವು ಇಂದು ಕೂತಿದ್ದೇವೆ. ಎಲ್ಲರ ಜೀವಮಾನದಲ್ಲಿ ಇಂತಹ ಅವಕಾಶ ಸಿಗುವುದಿಲ್ಲ. ಶತಮಾನಗಳಿಗೆ ಸಿಗುವ ಅವಕಾಶ ಇದು ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ಅವರು ಕರ್ಕಿ ಕೋಣಕಾರದ ಶ್ರೀಕುಮಾರ ಸಂಸ್ಥೆಯ ಆವಾರದಲ್ಲಿ ಅಯೋಧ್ಯೆಯ ಶ್ರೀ ರಾಮ ಮಂದಿರ ಲೋಕಾರ್ಪಣೆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಐದು ನೂರು ವರ್ಷಗಳ ಸುದೀರ್ಘ ಹೋರಾಟ, ಮೂರುವರೆ ಲಕ್ಷ ಜನರನ್ನು ಬಲಿ ತೆಗೆದುಕೊಂಡ ಹೋರಾಟಕ್ಕೆ ಇದೀಗ ತಾಂತ್ರಿಕ ಅಂತ್ಯ ಕಂಡಿದೆ. ಸಾಮಾನ್ಯ ಎರಡು ಅಕ್ಷರ ಮಂತ್ರ ಹೇಗಾಯಿತು. ರಾಮ ಎರಡು ಅಕ್ಷರ ಮಂತ್ರ ಆಯಿತು, ಮಂತ್ರಪಠಿಸಿ ಎಲ್ಲರಿಗೂ ಗೊತ್ತು, ಆದರೆ ಭಾವನೆಗಳನ್ನು ಬಿತ್ತಿದರೆ ರಣ ಮಂತ್ರ ಹೇಗಾಗಿತ್ತು, ಅದಕ್ಕೆ ಸಾಕ್ಷಿ ಇವತ್ತಿನ ಅಯೋದ್ಯೆ ಎಂದರು. ರಾಮ ಕೇವಲ ಎರಡು ಅಕ್ಷರ ಮಾತ್ರ ಅಲ್ಲ, ಬದಲಾಗಿ ಇದೊಂದು ರಣ ಮಂತ್ರ, ಬಂಕಿಮ ಚಂದ್ರರು ವಂದೇ ಮಾತರಂ ಬರೆದಾಗ ಆ ಶಬ್ದದ ಸಮುಚ್ಚಯದಲ್ಲಿ ತಾಯಿ ದುರ್ಗೆ ಕಾಣಿಸಿದ್ದಳು. ಇತಿಹಾಸ ತಣ್ಣಗೆ ನಿರ್ಮಾಣವಾಗುತ್ತದೆ. ಕೇವಲ ರಾಮ ಮಂದಿರ ನಿರ್ಮಾಣ ಮಾತ್ರವಲ್ಲ, ಸಾವಿರ ವರ್ಷಗಳ ದೌರ್ಜನ್ಯದ ಪರಂಪರೆಗೆ ಅಂತ್ಯ ಹಾಡಿದ ಕ್ಷಣ, ಹಿಂದು ಸಮಾಜ ತಲೆ ಎತ್ತಿ ನಿಲ್ಲಲು ಸಾಧ್ಯವಾಗಿದೆ ಎಂದರು.
ದುಡ್ಡಿದ್ದವರು ಕಟ್ಟಿದ ದೇವಸ್ಥಾನ ಅಲ್ಲ, ಸರಕಾರ ಕಟ್ಟಿದ ದೇವಸ್ಥಾನವಲ್ಲ, ಪ್ರತಿ ಒಬ್ಬರು ಇಟ್ಟಿಗೆ,ಹಣ ಹೀಗೆ ಒಂದಲ್ಲ ಒಂದು ಕೊಡುಗೆ ನೀಡಿ ಹಿಂದು ಸಮಾಜ ಕಟ್ಟಿದ ದೇವಾಲಯ ಇದಾಗಿದೆ. ಜಾತಿ ಹೆಸರು, ಬಣ್ಣದ ಹೆಸರು ಹೀಗೆ ಹಲವು ರೀತಿಯಲ್ಲಿ ಒಡೆದಿದ್ದರು. ಹಿಂದು ಹೆಸರು ಹೇಳಲು ನೆನಪು ಆಗುತ್ತಿರಲಿಲ್ಲ, ಅಷ್ಟು ರೀತಿಯಲ್ಲಿ ಒಡೆದಿದ್ದರು. ಭಗವಂತನ ಸಂಕಲ್ಪ ಬೇರೆ ಇದೆ. ಇವತ್ತು ಎದ್ದು ನಿಂತಿದ್ದೇವೆ. ಹಿಂದು ಸಮಾಜ ಮಲಗಿದರೆ ಕುಂಭಕರ್ಣ, ಎದ್ದರೆ ರಣ ಭೈರವ, ಮುಂದಿನ ದಿನದಲ್ಲಿ ಮತ್ತೊಂದು ಸಂಕ್ರಾಂತಿ ನಡೆಯಲಿಕ್ಕಿದೆ. ಇವತ್ತಿನ ದಿನ ಆ ಸಂಕ್ರಾಂತಿಗೆ ನಾಂದಿ ಆಗಲಿ ಎಂದು ಶುಭ ಹಾರೈಸುತ್ತೇನೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಸ್. ಹೆಗಡೆ ಕರ್ಕಿ ಮಾತನಾಡಿ ಅದು ನೂರು ವರ್ಷದ ಹೋರಾಟದ ಪ್ರೇರಣೆಯಾಗಿ ಇಡೀ ದೇಶದಲ್ಲಿ ಸಂಭ್ರಮ ಆಚರಣೆ ನಡೆಯುತ್ತಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆಯಿಂದ ಶ್ರೀರಾಮ ಭಕ್ತರ, ಹಿಂದುಗಳ ಕನಸು ನನಸಾಗಿದೆ ಎಂದರು.
ಮಾಜಿ ಜಿ. ಪಂ. ಸದಸ್ಯ ಶಿವಾನಂದ ಹೆಗಡೆ ಕಡತೋಕ ಮಾತನಾಡಿ ನೂರಾರು ವರ್ಷದ ಕನಸು ನನಸಾಗಿದೆ, ಅಯೋದ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಣೆ ಮಾಡಲಾಗಿದೆ ಎಂದರು. ನಮ್ಮೆಲ್ಲರ ನೆಚ್ಚಿನ ಸಂಸದ ಅನಂತಕುಮಾರ ಹೆಗಡೆಯವರು ಯಾವುದಕ್ಕೂ ಜಗ್ಗದ, ಬಗ್ಗದ ವ್ಯಕ್ತಿತ್ವ ಅವರಿದು, ಅಂತ ಅದ್ಭುತ ಸಂಸದರು ಸಿಕ್ಕಿದ್ದು ನಮ್ಮ ಅದೃಷ್ಟ, ಅನಂತಕುಮಾರ ನಿಲುವು ಹಿಂದುಪರ, ಅಷ್ಟೇ ಅಲ್ಲ ರಾಷ್ಟ್ರ ಪರ, ಬೇದಭಾವ ಜಾತಿ ಬಗ್ಗದೆ ರಾಷ್ಟ್ರ ಪ್ರೇಮ ಒಂದೆ ಉಸಿರು, ಹಿಂದು ಪರ, ರಾಷ್ಟ್ರ ಪರ ಇರುವ ಸಂಸದರು ಇದ್ದರೆ ಇವರೊಬ್ಬರೆ ಎಂದರು.
ವೇದಿಕೆಯಲ್ಲಿ ಕರ್ಕಿ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಶ್ರೀಕಾಂತ ಮೊಗೇರ, ನವಿಲಗೊಣ ಗ್ರಾಮ ಪಂಚಾಯತ ಅಧ್ಯಕ್ಷ ಸತೀಶ ಹೆಬ್ಬಾರ ಇದ್ದರು. ಶ್ರೀಕುಮಾರ ಸಮೂಹ ಸಂಸ್ಥೆಯ ಅಧ್ಯಕ್ಷ ವೆಂಕಟ್ರಮಣ ಹೆಗಡೆ ಸ್ವಾಗತಿಸಿ, ವಂದಿಸಿದರು. ರಾಮಭಜನೆ, ಮಹಾಪೂಜೆ ಹಾಗೂ ಪ್ರಸಾದಭೋಜನ ನಡೆದವು. ೩ಡಿ ಮಾದರಿಯಲ್ಲಿ ೫.೫ ಅಡಿ ಎತ್ತರದ ಪ್ರಭು ಶ್ರೀ ರಾಮನ ಪೋಟೋ ಅಳವಡಿಸಿ ವಿಶೇಷವಾಗಿ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕೊನಳ್ಳಿಯ ಮಾರುತಿ ನಾಯ್ಕ ಇವರ ಮಹಾಸತಿ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆದವು.