Slide
Slide
Slide
previous arrow
next arrow

ಕ್ರೀಡಾಕೂಟ: ಕಡತೋಕಾ ವಿದ್ಯಾರ್ಥಿ ರಾಷ್ಟ್ರಮಟ್ಟಕ್ಕೆ

300x250 AD

ಹೊನ್ನಾವರ : 2023-24 ನೇ ಸಾಲಿನ 17 ವರ್ಷದೊಳಗಿನವರ ರಾಜ್ಯಮಟ್ಟದ ಇಲಾಖಾ ಕ್ರೀಡಾಕೂಟದ ತ್ರಿವಿಧ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಜನತಾ ವಿದ್ಯಾಲಯ ಕಡತೋಕಾ ವಿದ್ಯಾರ್ಥಿ ಕುಮಾರ ಧರ್ಮೇಂದ್ರ ಸುಬ್ರಾಯ ಗೌಡ ಹಾಗೂ ತಮ್ಮ ಸೇವಾವಧಿಯಲ್ಲಿ ಎರಡನೇ ಬಾರಿ ಇಲಾಖಾ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಯನ್ನು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲು ಮಾರ್ಗದರ್ಶನ ಮಾಡಿದ ತರಬೇತಿ ಶಿಕ್ಷಕ ಕೃಷ್ಣ ಆರ್. ಗೌಡ ಇವರನ್ನು, ವಿದ್ಯಾಲಯದಲ್ಲಿ ಸನ್ಮಾನಿಸಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಶುಭ ಹಾರೈಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಹೊನ್ನಾವರ ಪ್ರೌಢಶಾಲಾ ದೈಹಿಕ ಶಿ.ಶಿ. ಸಂಘದ ಅಧ್ಯಕ್ಷರು ಹಾಗೂ ವಿದ್ಯಾಲಯದ ದೈ.ಶಿ. ಶಿಕ್ಷಕರಾದ ಕೃಷ್ಣ ಆರ್. ಗೌಡ, ಈ ತನಕ ಯಾವುದೇ ಸಂಘ ಸಂಸ್ಥೆಗಳು ಮಾಡದ ಕಾರ್ಯವನ್ನು ನೀವು, ನಮ್ಮ ವಿದ್ಯಾರ್ಥಿ & ನನ್ನನ್ನು ಸನ್ಮಾನಿಸುವುದರ ಮೂಲಕ ಮಾಡಿದ್ದೀರಿ ಈ ಕಾರ್ಯ ಉತ್ತರ ಕನ್ನಡ ಜಿಲ್ಲೆಗೆ ಮಾದರಿಯಾಗಿದೆ ಎಂದರು. ಜಿಲ್ಲಾ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರು & ಸಹಾಯಧನ ಪಡೆಯುವ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಮಹೇಶ ಜಿ. ಶೆಟ್ಟಿ ಮಾತನಾಡುತ್ತ ದ.ಕ. ಜಿಲ್ಲೆಯ ಹಾಗೆಯೇ ನಮ್ಮ ಜಿಲ್ಲೆಯಲ್ಲಿಯೂ ಸಾಧನೆ ತೋರಿದ ವಿದ್ಯಾರ್ಥಿ ಮತ್ತು ಮಾರ್ಗದರ್ಶಕರನ್ನು ಗೌರವಿಸುವ ಕಾರ್ಯ ಇಲಾಖೆ ಮತ್ತು ಸಂಘದಿಂದ ಆಗಬೇಕು. ಈ ದಿಶೆಯಲ್ಲಿ ಇದು ನಮ್ಮ ಮೊದಲ ಪ್ರಯತ್ನ ಎಂದರು.

300x250 AD

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಪ್ರಾಚಾರ್ಯರಾದ ಶ್ರೀಮತಿ ದುರ್ಗಮ್ಮ ಪಿ.ಎಚ್., ನಮ್ಮ ವಿದ್ಯಾಲಯದಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಸಾಧನೆ ತೋರಿದವರನ್ನು ಸಮಾನವಾಗಿ ಗೌರವಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ವಿದ್ಯಾಲಯದ ಮುಖ್ಯ ಶಿಕ್ಷಕರಾದ ದಿನೇಶ ಎನ್. ವೈದ್ಯ, ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಂಟಿ ಕಾರ್ಯದರ್ಶಿಗಳಾದ ವಿನಾಯಕ ಎಸ್. ಹೆಗಡೆ, ತಾಲ್ಲೂಕಾ ಪ್ರೌ.ಶಾ. ದೈ.ಶಿ.ಶಿ. ಸಂಘದ ಉಪಾಧ್ಯಕ್ಷ ರಾದ ಗೌರೀಶ ಭಂಡಾರಿ, ಕಾರ್ಯದರ್ಶಿ ಶ್ರೀ ವಿಶ್ವನಾಥ ಗೌಡ, ಖಜಾಂಚಿ ಶ್ರೀ ರಾಜೇಶ ನಾಯಕ, ಸಂಘದ ಪದಾಧಿಕಾರಿಗಳಾದ ಮಂಜುನಾಥ ಗೌಡ, ವಸಂತ್ ಅಡಿಗುಂಡಿ, ಕೋಸ್ತ್ಯಾಂವ್ ಗೊನ್ಸಾಲ್ವೀಸ್ ಹಾಗೂ ಜನತಾ ವಿದ್ಯಾಲಯದ ಸಂ.ಪ.ಪೂ. ಕಾಲೇಜಿನ ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top