
ಕಾರವಾರ: ರಾಮಜನ್ಮಭೂಮಿಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆ ನಗರದಲ್ಲಿ ಸಂಭ್ರಮಾಚರಣೆ ಕಳೆಗಟ್ಟಿದೆ. ನಗರದಾದ್ಯಂತ ಶ್ರೀರಾಮನ ಭಾವಚಿತ್ರವಿರುವ ಬಾವುಟ, ಬ್ಯಾನರ್‌ಗಳು ಕಂಗೊಳಿಸುತ್ತಿವೆ. ವಿವಿಧ ಸಂಘಟನೆಗಳಿಂದ ಭರ್ಜರಿ ಶೋಭಾಯಾತ್ರೆ ಕೂಡಾ ನಡೆದಿದ್ದು, ಪತಂಜಲಿ ಯೋಗಸಮಿತಿ ನೇತೃತ್ವದಲ್ಲಿ ಬೃಹತ್ ಶೋಭಾಯಾತ್ರೆ ಆಯೋಜನೆ ಮಾಡಲಾಗಿತ್ತು. ನಗರದ ಮಾಲಾದೇವಿ ಮೈದಾನದಿಂದ ಕೋಡಿಭಾಗ, ಬಾಂಡಿಶಿಟ್ಟಾ ಸೇರಿ ಪ್ರಮುಖ ಬೀದಿಗಳಲ್ಲಿ ನೂರಾರು ಬೈಕ್‌ಗಳಲ್ಲಿ ಶ್ರೀರಾಮನಿಗೆ ಜೈಕಾರ ಹಾಕುತ್ತಾ ತೆರಳಿದ ಸವಾರರು ತೆರಳಿದರು.
ಕಾರವಾರದ ಕೋಡಿಭಾಗ ಯುವಕರಿಂದ ಕೂಡಾ ಬೃಹತ್ ಬೈಕ್ ರ‌್ಯಾಲಿ ಆಯೋಜಿಸಲಾಗಿತ್ತು. ರ‌್ಯಾಲಿಯಲ್ಲಿ ಶ್ರೀರಾಮನ ಬೃಹತ್ ಕಟೌಟ್ ಮೆರವಣಿಗೆ ಮಾಡಲಾಯಿತು. ಕಾಳಿ ರಿವರ್ ಗಾರ್ಡನ್‌ನಿಂದ ನಂದನಗದ್ದಾ, ಕಾಜುಭಾಗ ಮಾರ್ಗವಾಗಿ ಸುಭಾಷ್ ವೃತ್ತದ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೋಡಿಭಾಗದಲ್ಲಿ ಕೊನೆಗೊಂಡಿತು. ಬೈಕ್ ರ‌್ಯಾಲಿಯಲ್ಲಿ ನೂರಕ್ಕೂ ಅಧಿಕ ಯುವಕರು ಭಾಗಿಯಾಗಿದ್ದರು.