ಶಿರಸಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿರಸಿ ಶೈಕಣಿಕ ಜಿಲ್ಲೆಯ ‘ನಮ್ಮ ನಡೆ ಸರಕಾರಿ ಶಾಲೆ ಕಡೆ’ 7 ನೇ ವಿಶೇಷ ಕಾರ್ಯಕ್ರಮದ ಅಂಗವಾಗಿ ಶಿರಸಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ ತಂಡ ಮುಂಡಗೋಡು ತಾಲೂಕಿನ ಕುರ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಂಪೌಂಡ್ ಗೋಡೆಗೆ ಬಣ್ಣ ಹಚ್ಚುವ ಮೂಲಕ ಶಾಲೆಯ ಅಂದ ಚೆಂದ ಹೆಚ್ಚುವಂತೆ ಮಾಡಿ ಶ್ಲಾಘನೆಗೆ ಪಾತ್ರರಾಗಿದ್ದಾರೆ..ಎಸ್.ಓ.ಸಿ. ವೀರೇಶ ಹಾಗೂ ಲೇಡಿ ಸ್ಕೌಟ್ ಮಾಸ್ಟರ್ ಶ್ರೀಮತಿ ಮಮತಾ ಆರ್. ನೇತೃತ್ವದಲ್ಲಿ ರೋವರ್ಸ್ ಹಾಗೂ ರೇಂಜರ್ಸ್’ಗಳು ಕಾರ್ಯನಿರ್ವಹಿಸಿದರು. ಶಾಲಾ ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕ ವೃಂದ ಹರ್ಷ ವ್ಯಕ್ತಪಡಿಸಿದ್ದಾರೆ.
ಬಣ್ಣದಿಂದ ಸರಕಾರಿ ಶಾಲೆ ಅಂದ ಹೆಚ್ಚಿಸಿದ ಶಿರಸಿಯ ರೋವರ್ಸ್-ರೇಂಜರ್ಸ್
