Slide
Slide
Slide
previous arrow
next arrow

ಜ.28ಕ್ಕೆ ಯಲ್ಲಾಪುರದಲ್ಲಿ ‘ವಿಪ್ರ ಸಮಾವೇಶ’

300x250 AD

ಯಲ್ಲಾಪುರ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ವಿಪ್ರ ಸಮಾವೇಶ ಜ.28 ರಂದು ಪಟ್ಟಣದ ಎಪಿಎಂಸಿ ರೈತಸಭಾಭವನದಲ್ಲಿ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ ಹೇಳಿದರು. ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾವೇಶದಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಿಪ್ರ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವರು. ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾದ ವಿವಿಧ ಅರ್ಥಪೂರ್ಣ ಗೋಷ್ಠಿಗಳಲ್ಲಿ ಮಂಡಿಸಲಾಗುವ ಚರ್ಚೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿಯೂ ಪ್ರಯತ್ನ ನಡೆಸುತ್ತೇವೆ ಎಂದ ಅವರು, ನಮ್ಮ ವಿಶಿಷ್ಟ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಕಾರ್ಯಕ್ರಮಕ್ಕೆ ಪೂರಕವಾದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು

ತಾಲೂಕು ಹವ್ಯಕ ಸಂಘದ ಅಧ್ಯಕ್ಷ ಡಿ.ಶಂಕರ ಭಟ್ಟ, ಮಹಾಸಭಾದ ತಾಲೂಕು ಸಂಚಾಲಕ ಶಂಕರ ಭಟ್ಟ ತಾರೀಮಕ್ಕಿ, ಮಹಿಳಾ ಸಂಚಾಲಕಿ ಚಂದ್ರಕಲಾ ಭಟ್ಟ, ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀಪಾದ ರಾಯ್ಸದ, ಪ್ರಮುಖರಾದ ಪ್ರಮೋದ ಹೆಗಡೆ, ನಾರಾಯಣ ಹೆಗಡೆ ಕರಿಕಲ್, ಎಂ.ಆರ್.ಹೆಗಡೆ ಕುಂಬ್ರೀಗುಡ್ಡೆ, ಕೆ ಎಸ್ ಭಟ್ಟ, ಪ್ರಸಾದ ಹೆಗಡೆ, ಕುಮಾರ ಸುಬ್ರಹ್ಮಣ್ಯ ಭಟ್ಟ ಹಂಡ್ರಮನೆ,ಸಿ.ಜಿ. ಹೆಗಡೆ, ಟಿ.ಎನ್. ಭಟ್ಟ, ಸದಾನಂದ ಭಟ್ಟ, ಶ್ರೀರಂಗ ಕಟ್ಟಿ, ವೆಂಕಟರಮಣ ಭಟ್ಟ ಗುರ್ತೆಗದ್ದೆ, ರಾಮಕೃಷ್ಣ ಭಾಗ್ವತ ದಂತಳಿಗೆ ಇಲ್ಲಿದ್ದರು.

300x250 AD
Share This
300x250 AD
300x250 AD
300x250 AD
Back to top