ಸಿದ್ದಾಪುರ: ತಾಲೂಕಿನ ಹೇರೂರು ಸಿದ್ಧಿವಿನಾಯಕ ದೇವಾಲಯದಲ್ಲಿ ಅಯೋಧ್ಯೆಯಲ್ಲಿ ನಡೆಯುತ್ತಿರುವ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನ ಮಹೋತ್ಸವದ ಅಂಗವಾಗಿ ಶ್ರೀಮನ್ನೆಲೆಮಾವಿನ ಮಠದ ಶ್ರೀ ಮಾಧವಾನಂದ ಭಾರತೀ ಸ್ವಾಮಿಗಳ ಕೃಪಾಶೀರ್ವಾದದೊಂದಿಗೆ ಜ.22ರಂದು ದಶಸಹಸ್ರ ದೀಪೋತ್ಸವ ಜರುಗಲಿದೆ. ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ ಭಜನೆ, 6.30ರಿಂದ ದಶಸಹಸ್ರ ದೀಪೋತ್ಸವ, ಸಂಜೆ 7ರಿಂದ ವಿ.ವಿಶ್ವನಾಥ ಭಟ್ಟ ನೀರಗಾನ ಇವರಿಂದ ಉಪನ್ಯಾಸ, ಕರಸೇವಕರಿಗೆ ಗೌರವಸಮರ್ಪಣೆ, ತಲಗಾರು ತಂಡದವರಿಂದ ಸಾಂಪ್ರದಾಯಿಕ ಡೊಳ್ಳು ಕುಣಿತ,ಮಹಾಮಂಗಳಾರತಿ ನಂತರ ಪ್ರಸಾದ ಭೋಜನ ವಿತರಣೆ ನಡೆಸಯಲಿದೆ ಎಂದು ಹೇರೂರಿನ ಶ್ರೀರಾಮ ಸೇವಾ ಸಮಿತಿ ಹಾಗೂ ಸಿದ್ಧಿವಿನಾಯಕ ದೇವಾಲಯದ ಪ್ರಕಟಣೆ ತಿಳಿಸಿದೆ.