ಶಿರಸಿ: ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ ಇದರ ಪ್ರಧಾನ ಕಛೇರಿಯಲ್ಲಿ ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳ ಪ್ರತಿನಿಧಿಗಳೊಂದಿಗೆ ಸೌಹಾರ್ದಯುತ ಸಭೆಯನ್ನು ಜ,೧೭ರಂದು ಹಮ್ಮಿಕೊಳ್ಳಲಾಗಿತ್ತು. ಆರು ತಾಲೂಕಿನ ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸಭೆಯನ್ನು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಲಾಯಿತು. ಸಂಘದ ಉಪಾಧ್ಯಕ್ಷರಾದ ಎಮ್.ಎನ್.ಭಟ್ಟ, ತೋಟಿಮನೆ ಸ್ವಾಗತಿಸಿದರು.ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೆಂ.ವೈದ್ಯ, ಮತ್ತಿಘಟ್ಟ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಭೆಯಲ್ಲಿ ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳಿಗೆ ಸಂಘದಿಂದ ದೊರೆಯುವ ಸೌಲಭ್ಯಗಳ ಕುರಿತು ಹಾಗೂ ಇನ್ನಿತರ ಪ್ರಮುಖ ವಿಚಾರಗಳ ಕುರಿತು ಸಮಗ್ರವಾಗಿ, ಸೌಹಾರ್ದಯುತವಾಗಿ ಸಮಾಲೋಚನೆ ನಡೆಸಲಾಯಿತು.ಈ ಸಂದರ್ಭದಲ್ಲಿ ಸಂಘದ ಎಲ್ಲಾ ನಿರ್ದೇಶಕರುಗಳು ಹಾಗೂ ಸಂಘದ ಪ್ರಭಾರಿ ಪ್ರಧಾನ ವ್ಯವಸ್ಥಾಪಕರಾದ ವಿಜಯಾನಂದ ಎಸ್.ಭಟ್ಟ ಉಪಸ್ಥಿತರಿದ್ದರು.ಸಂಘದ ನಿರ್ದೇಶಕರಾದ ರವೀಂದ್ರ ಜೆ.ಹೆಗಡೆ, ಹೀರೆಕೈ ವಂದನಾರ್ಪಣೆ ಮಾಡಿದರು.
ಮಧ್ಯಾಹ್ನ 3.00 ಘಂಟೆಗೆ ಅಡಿಕೆ ಖರೀದಿ ವರ್ತಕರೊಂದಿಗೆ ಸೌಹಾರ್ದಯುತ ಸಭೆಯನ್ನುನಡೆಸಲಾಯಿತು.ಈ ಸಭೆಯ ಸ್ವಾಗತ ಭಾಷಣವನ್ನು ಸಂಘದ ಪರಿಣಿತ ನಿರ್ದೇಶಕರಾದ ಎನ್.ಜಿ.ಹೆಗಡೆ, ಬಾಳೆಗದ್ದೆ ನೆರವೇರಿಸಿದರು. ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ವೆಂ.ವೈದ್ಯ, ಮತ್ತಿಘಟ್ಟ ಪ್ರಾಸ್ತಾವಿಕವಾಗಿ ಮಾತನಾಡುವುದರ ಜೊತೆಗೆ ಅಡಿಕೆ ವರ್ತಕರ ಮಹತ್ವ ಹಾಗೂ ಇನ್ನಿತರ ಪ್ರಮುಖ ವಿಚಾರಗಳ ಕುರಿತು ಸಮಗ್ರ ಸಮಾಲೋಚನೆ ನಡೆಸಿದರು.ಈ ಸಂದರ್ಭದಲ್ಲಿ ಸಂಘದ ಎಲ್ಲಾ ನಿರ್ದೇಶಕರುಗಳು ಹಾಗೂ ಸಂಘದ ಪ್ರಭಾರಿ ಪ್ರಧಾನ ವ್ಯವಸ್ಥಾಪಕರಾದ ವಿಜಯಾನಂದ ಎಸ್. ಭಟ್ಟ ಉಪಸ್ಥಿತರಿದ್ದರು.ಸಂಘದ ನಿರ್ದೇಶಕರಾದ ಕೃಷ್ಣ ಜಿ. ಹೆಗಡೆ, ಜೂಜಿನಬೈಲ್ ವಂದನಾರ್ಪಣೆ ಮಾಡಿದರು.ಸಂಘದ ಸಿಬ್ಬಂದಿಯಾದ ಗೋಪಾಲ ಹೆಗಡೆ ಹಾಗೂ ರವಿಚಂದ್ರ ಹೆಗಡೆ ನಿರೂಪಿಸಿದರು.