Slide
Slide
Slide
previous arrow
next arrow

ಕಾಂತರಾಜು ವರದಿ ಅನುಷ್ಠಾನಗೊಳಿಸಲು ಮನವಿ ಸಲ್ಲಿಕೆ

300x250 AD

ಕಾರವಾರ: ಕಾಂತರಾಜು ವರದಿ ಅನುಷ್ಠಾನಗೊಳಿಸುವಂತೆ ಹಾಗೂ ಕಲ್ಲಡಕ ಪ್ರಭಾಕರ ಭಟ್ ಅವರ ವಿರುದ್ಧ ಕ್ರಮಕ್ಕೆ ಆಗಮಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ಸರ್ಕಾರ 2015-16 ನೇ ಸಾಲಿನಲ್ಲಿ ಕಾಂತರಾಜ ನೇತೃತ್ವದಲ್ಲಿ ಒಂದು ಆಯೋಗವನ್ನು ರಚನೆ ಮಾಡಿತ್ತು. ಈ ಆಯೋಗದಿಂದ ಸರ್ಕಾರಿ ಅಧಿಕಾರಿಗಳು, ನೌಕರರಿಂದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಮತ್ತು ಜಾತಿಯ ಬಗ್ಗೆ ಸಮಿಕ್ಷೆಯನ್ನು ಮಾಡಿಸಿ ವರದಿಯನ್ನು ಸಿದ್ದಪಡಿಸಲಾಗಿತ್ತು. ಆದರೆ ಈಗ ಈ ವರದಿಯನ್ನು ಜಾರಿಗೆ ತರಬಾರದು ಎಂದು ಲಿಂಗಾಯಿತರು ಮತ್ತು ಒಕ್ಕಲಿಗರು ವಿರೋಧ ಮಾಡಿದ್ದಾರೆ. ಆದರೆ ಸಮಾಜದ ಹಿತದೃಷ್ಠಿಯಿಂದ ಈ ವರದಿ ಜಾರಿಗೆ ಮಾಡಬೇಕು ಎಂದರು.

ಲಿಂಗಾಯಿತರು, ಒಕ್ಕಲಿಗರು ಜಾತಿಯ ಮಠಗಳನ್ನು ಕಟ್ಟುವಲ್ಲಿ ಮತ್ತು ಜಾತಿ ಹೆಸರಿನ ಮೇಲೆ ಶಿಕ್ಷಣ ಸಂಸ್ಥೆಗಳನ್ನು ತರೆಯುವಾಗ ಹಾಗೂ ಚುಣಾವಣೆಯಲ್ಲಿ ಸ್ಪರ್ಧಿಸಲು ಟೇಕೇಟ್ ಕೇಳುವಾಗ ಜಾತಿಯ ಹೆಸರು ಹೇಳಿ ಸೌಲಭ್ಯ ಮತ್ತು ಹಕ್ಕುಗಳನ್ನು ಪಡೆಯುತ್ತಾರೆ. ಆದರೆ ಈಗ ಜಾತಿ ಸಮಿಕ್ಷೆಯ ವರದಿಯನ್ನು ವಿರೋಧ ಮಾಡುವುದನ್ನು ಖಂಡಿಸುತ್ತೇವೆ. ಒಕ್ಕಲಿಗರು, ಲಿಂಗಾಯಿತರು ಎಸ್‌ಸಿ,ಎಸ್‌ಟಿಗಳಿಕ್ಕಿಂತ ಇವರ ಜನ ಸಂಖ್ಯೆ ಕಡಿಮೆ ಇದೆ. ಆದರೆ ಈ ಎರಡು ಸಮುದಾಯದವರು ರಾಜಕೀಯ ಸ್ಥಾನಮಾನಗಳನ್ನು ಇವರ ಜಾತಿಯ ಜನಸಂಖ್ಯೆಕ್ಕಿಂತ ಹೆಚ್ಚು ಪಡೆಯುತ್ತಾ ಬಂದಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು. ಅಧಿಕಾರ ಮತ್ತು ಸೌಲಭ್ಯಗಳು ಜನಸಂಖ್ಯೆ ಆಧಾರದ ಮೇಲೆ ಹಂಚಿಕೆಯಾದರೆ ಕಡಿಮೆ ಸ್ಥಾನಮಾನಗಳು ಸೌಲಭ್ಯಗಳು ಸಿಗುತ್ತೇವೆ ಎನ್ನುವ ಕಾರಣಕ್ಕೆ ಲಿಂಗಾಯಿತ, ಒಕ್ಕಲಿಗ ಜಾತಿಯವರು ಕಾಂತರಾಜ (ಜಯ ಪ್ರಕಾಶ ಹೆಗಡೆ)ಜಾತಿ ವರದಿಯನ್ನು ವಿರೋಧ ಮಾಡುತ್ತಾರೆ. ಸರ್ಕಾರ ಇವರ ಯಾವುದೇ ವಿರೋಧವನ್ನು ಗಣನೆಗೆ ತೆಗೆದುಕೊಳ್ಳದೆ ಜಾತಿ ಗಣತಿ ವರದಿಯನ್ನು ಕೂಡಲೇ ಜಾರಿಮಾಡಬೇಕು ಎಂದು ಒತ್ತಾಯಿಸಿದರು.

300x250 AD

ಕಲ್ಲಡಕ ಪ್ರಭಾಕರ ಭಟ್ಟ ಹೆಣ್ಣು ಕುಲಕ್ಕೆ ಅವಮಾನ, ಅಪಮಾನ ಮಾಡಿ ಹೆಣ್ಣು ಮಕ್ಕಳ ಬಗ್ಗೆ ಸಮಾಜದಲ್ಲಿರುವ ಘನತೆ ಗೌರವವನ್ನು ಹಾಳು ಮಾಡಿ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವ ಹೇಳಿಕೆ ನೀಡಿದ್ದಾರೆ. ಹೆಣ್ಣುಮಕ್ಕಳ ಅಪಮಾನ ಮಾಡಿದ ಕಲ್ಲಡಕ ಪ್ರಭಾಕರ ಭಟ್ಟ ಅವರನ್ನು ಕೂಡಲೇ ಬಂಧಿಸಿ ಸರ್ಕಾರ ಇವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸುತ್ತೇವೆ. ಚಿಕ್ಕಮಗಳೂರ ಜಿಲ್ಲೆ ತರೆಕೇರಿ ತಾಲ್ಲೂಕಿನ ಗೊಲ್ಲರಹಟ್ಟಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಯುವಕ ಗ್ರಾಮದ ಒಳಗೆ ಹೋದ ಕಾರಣಕ್ಕೆ ಆತನ ಮೇಲೆ ಗ್ರಾಮದ ಮೇಲ್ಜಾತಿಯ ಜನರು ಹಲ್ಲೆಮಾಡಿ ದಂಡ ಹಾಕಿ ಅಸ್ಪೃಷ್ಯತೆ ಆಚರಣೆ ಮಾಡಿ ಅವಮಾನಿಸಿದ ಬಗ್ಗೆ ತಪ್ಪಿತಸ್ಥರ ಮೇಲೆ ಕಠಿಣ ಕಾನೂನಿನ ಕ್ರಮ ಕೈಗೊಳ್ಳಬೇಕು. ಇಂತಹ ಮೂಡ ನಂಬಿಕೆ, ಮಾನವ ಹಕ್ಕು ಉಲ್ಲಂಘನೆ, ಅಮಾನವಿಯ ಪದ್ದತಿಗಳನ್ನು ಕೂಡಲೇ ನಿಲ್ಲುಲು ಅಗತ್ಯ ಕಾನೂನು ಕ್ರಮ ಜರುಗಿಸಬೇಕು ಎಂದ ಆಗ್ರಹಿಸಿದರು. ಫಕೀರಪ್ಪ ಎಸ್., ಸಂತೋಷ ಕಟ್ಟಿಮನಿ, ಸಂಗೀತಾ, ಪರಶುರಾಮ, ಗೋಪಾಲ ನಡಕಿನಮನಿ, ಹುಲಿಗಪ್ಪ ಪ್ರತಿಭಟನೆಯಲ್ಲಿದ್ದರು.

Share This
300x250 AD
300x250 AD
300x250 AD
Back to top