Slide
Slide
Slide
previous arrow
next arrow

ಕಾಯಿದೆ ಉಲ್ಲಂಘಿಸಿ ಜಮೀನು ಮಾರಾಟ: ಮೂಲ ಮಂಜೂರುದಾರರ ಹೆಸರಿಗೆ ಮರುಸ್ಥಾಪನೆ

300x250 AD

ಕಾರವಾರ: ಪ.ಜಾತಿ ಮತ್ತು ಪಂಗಡದವರಿಗೆ ಪಿ.ಟಿ.ಸಿ.ಎಲ್. ಕಾಯಿದೆ ಅಡಿ ಮಂಜೂರು ಮಾಡಿದ್ದ ಜಮೀನನ್ನು ಕಾನೂನು ಉಲ್ಲಂಘಿಸಿ ಖರೀದಿ ಮಾಡಿದವರಿಂದ ಮೂಲ ಮಂಜೂರುದಾರರ ವಾರಸುದಾರರಿಗೆ ಮರುಸ್ಥಾಪಿಸುವ ಮೂಲಕ ಪೂರ್ವಜರ ತಪ್ಪಿನಿಂದ ಭೂಮಿ ಕಳೆದುಕೊಂಡು ಪರಿತಪಿಸುತ್ತಿದ್ದ ಪ.ಜಾತಿ ಮತ್ತು ಪಂಗಡದ 3 ಕುಟುಂಬಗಳಿಗೆ ಒಟ್ಟು 20.44 ಎಕ್ರೆ ಜಮೀನನ್ನು ಕಬ್ಜಾ ಕೊಡಿಸುವ ಅತ್ಯಂತ ಅಪರೂಪದ ಕಾರ್ಯದ ಮೂಲಕ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಶಾಶ್ವತ ಸೌಲಭ್ಯ ಒದಗಿಸಿದ್ದಾರೆ.

ಶಿರಸಿ ತಾಲೂಕು ಬನವಾಸಿ ಹೋಬಳಿಯ ಕುಪ್ಪಗಡ್ಡೆ ಗ್ರಾಮದ ಬಸವರಾಜ ನಾಗಪ್ಪ ಭೋವಿ ವಡ್ಡರ ಇವರ ಪೂರ್ವಜರು ಗ್ರಾಮದ ಸರ್ವೇ ನಂ 94 ರಲ್ಲಿ ಮಾರಾಟ ಮಾಡಿದ್ದ 7 ಎಕ್ರೆ 11 ಗುಂಟೆ ಜಮೀನನ್ನು , ಮೂಲ ವಾರಿಸುದಾರರಿಗೆ ಮರು ಸ್ಥಾಪಿಸಲು ಖುದ್ದು ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿಗಳು, ಪೊಲೀಸ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳದಲ್ಲೇ ಜಮೀನಿನ ಅಳತೆ ಮಾಡಿಸಿ , ಕಬ್ಜಾ ಆದೇಶ ಪತ್ರವನ್ನು ವಿತರಿಸಿದರು. 1966 ರಲ್ಲಿ ಈ ಜಮೀನನ್ನು ಪೂರ್ವಜರು ಮಾರಾಟ ಮಾಡಿದ್ದು ಅದನ್ನು ಇದುವರೆಗೆ 3 ಜನ ಖರೀದಿ ಮಾಡಿದ್ದು, ಈ ಜಮೀನಿನ ಕುರಿತಂತೆ ಜಿಲ್ಲಾಧಿಕಾರಿ ಅವರ ನ್ಯಾಯಾಲಯ ದ ಆದೇಶದಂತೆ ಮೂಲ ಮಂಜೂರಿಯ ವಾರಿಸುದಾರರ ಹೆಸರಿಗೆ ಮರುಸ್ಥಾಪಿಸಿ ಆದೇಶಿಸಿದರು. ಕಾನೂನು ಪ್ರಕಾರ ಈ ಜಮೀನು ನಿಮಗೆ ಸೇರಬೇಕಾದದ್ದು, ಸರ್ಕಾರ ನಿಮ್ಮ ಅಭಿವೃದ್ಧಿ ಗೆ ನೀಡಿರುವ ಜಮೀನನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡದಂತೆ ಸೂಚಿಸಿದ ಜಿಲ್ಲಾಧಿಕಾರಿಗಳು,ಇದರಲ್ಲಿ ಕೃಷಿ ಚಟುವಟಿಕೆ ಕೈಗೊಂಡು ಅಭಿವೃದ್ಧಿ ಹೊಂದುವಂತೆ ತಿಳಿಸಿದರು.

ಜಮೀನಿನ ಕಬ್ಜಾ ಪಡೆದ ಬಸವರಾಜ ನಾಗಪ್ಪ ಭೋವಿ ವಡ್ಡರ್ ಮತ್ತು ಅನುಸೂಯಾ ದಂಪತಿಗಳು, ನಮ್ಮ ಜಮೀನನ್ನು ನಮಗೆ ಕೊಡಿಸಿದ ಜಿಲ್ಲಾಧಿಕಾರಿಗಳಿಗೆ ವಂದಿಸಿ, ಈ ಜಮೀನಿನಲ್ಲಿ ಭತ್ತ ದ ಬೆಳೆ ಬೆಳೆಯುತ್ತೆವೆ ಮತ್ತು ತೋಟ ನಿರ್ಮಾಣ ಮಾಡಿಕೊಂಡು ತಮ್ಮ ಇಬ್ಬರು ಮಕ್ಕಳಿಗೆ ಉತ್ತಮ ಭವಿಷ್ಯ ನಿರ್ಮಿಸುವುದಾಗಿ ಹಾಗೂ ಯಾವುದೇ ಸಂದರ್ಭದಲ್ಲೂ ಇದನ್ನು ಮಾರಾಟ ಮಾಡುವುದಿಲ್ಲ ಎಂದರು. ಇದುವರೆಗೆ ಕೂಲಿ ಕೆಲಸ ಮಾಡುತ್ತಿದ್ದ ನಮಗೆ ಜಮೀನು ದೊರೆತಿರುವ ಸಂತಸದಲ್ಲಿ ಏನು ಹೇಳಬೇಕು ತಿಳಿಯುತ್ತಿಲ್ಲ ಆದರೆ ಅತ್ಯಂತ ಸಂತಸವಾಗಿದೆ , ಜಿಲ್ಲಾಧಿಕಾರಿಗಳಿಗೆ ಸದಾ ಕೃತಜ್ಞರಾಗಿರುತ್ತೇವೆ ಎಂದರು .

300x250 AD

ಮುಂಡಗೋಡು ತಾಲೂಕಿನ ನಂದಿಕಟ್ಟಾ ಗ್ರಾಮದ ಸ.ನಂ.219 ಬ ರಲ್ಲಿ 3 ಎಕರೆ 17 ಗುಂಟೆ ಜಮೀನನ್ನು ಫಕೀರಪ್ಪ ಕೇರಪ್ಪ ಮಾದರ್ ಅಲಿಯಾಸ್ ಹರಿಜನ ಅವರಿಗೆ ಹಾಗೂ ಹುನಗುಂದ ದಲ್ಲಿ 10 ಎಕರೆ 16 ಗುಂಟೆ ಶಿವಪ್ಪ ರೂಪಲಮಪ್ಪ ಲಮಾಣಿ ಅವರಿಗೆ ಕಬ್ಜಾ ಆದೇಶವನ್ನು ಜಿಲ್ಲಾಧಿಕಾರಿ ವಿತರಿಸಿದರು. ಜಿಲ್ಲಾಧಿಕಾರಿ ಒಬ್ಬರು ಈ ರೀತಿ ಪ.ಜಾತಿ ಪಂಗಡದವರಿಗೆ ಜಮೀನು ಕಬ್ಜಾ ಕೊಡಿಸಲು ಖುದ್ದು ಆಗಮಿಸಿದ್ದು ಇದೇ ಮೊದಲ ಬಾರಿಯಾಗಿದ್ದು, ಜಮೀನು ಪಡೆದವರಿಗೆ ಜಮೀನಿನ ಮಹತ್ವ ಮತ್ತು ಕಾನೂನಿನ ಅರಿವು ಮೂಡಿಸಿ, ನ್ಯಾಯ ಒದಗಿಸಿದ ಈ ಕಾರ್ಯ ಸದಾ ನೆನಪಿನಲ್ಲಿರುವ ಮಾದರಿ ಕಾರ್ಯವಾಗಿದೆ. ಶಿರಸಿ ತಹಸೀಲ್ದಾರ್ ಶ್ರೀಧರ್ ,ಮುಂಡಗೋಡ ತಹಸೀಲ್ದಾರ್ ಶಂಕರ ಗೌಡಿ, ತಾಲೂಕು ಭೂ ಧಾಖಲೆಗಳ ನಿರ್ದೇಶಕರು,ಸರ್ವೇಯರ್ ಗಳು, ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.

Share This
300x250 AD
300x250 AD
300x250 AD
Back to top