ಕಾರವಾರ: ಮೀನುಗಾರಿಕೆ ನಡೆಸುತ್ತಿರುವ ವೇಳೆಯಲ್ಲಿ ಬೋಟ್‌ನಲ್ಲಿ ನೀರು ನುಗ್ಗಿದ್ದು, ಬೋಟ್‌ನಲ್ಲಿರುವ ಏಳು ಮೀನುಗಾರರನ್ನು ಕಾರವಾರ ಕೋಸ್ಟ್ ಗಾರ್ಡ್ ,ಗೋವಾ ಕೋಸ್ಟ್ ಗಾರ್ಡ್ ಸಮನ್ವಯತೆಯಲ್ಲಿ ಮೀನುಗಾರರ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.
ಮಲ್ಪೆ ಮೂಲದ ಬೋಟ್‌ನಲ್ಲಿ ಮಂಗಳೂರಿನ ಮೀನುಗಾರರು ಮೀನುಗಾರಿಕೆಗೆಂದು ತೆರಳಿದ್ದಾಗ ಆಕಸ್ಮಿಕವಾಗಿ ಬೋಟ್ ಒಳಗೆ ನೀರು ನುಗ್ಗಿದ್ದು, ಇದನ್ನು ಗಮನಿಸಿದ ಮೀನುಗಾರರು ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿದ ಕ್ಷಣಮಾತ್ರದಲ್ಲಿ ಕಾರ್ಯಾಚರಣೆಗಿಳಿದ ಕಾರವಾರ ಕೋಸ್ಟ್ ಗಾರ್ಡ್ ,ಗೋವಾ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ಮೀನುಗಾರರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.