Slide
Slide
Slide
previous arrow
next arrow

ಶೆಜ್ಜೇಶ್ವರ ನೂತನ ದೇವಾಲಯ ನಿರ್ಮಾಣ: ಜ.21ಕ್ಕೆ ವಿಶೇಷ ಸಭೆ

300x250 AD

ಕಾರವಾರ: ತಾಲೂಕಿನ ಶೇಜವಾಡದ ಶ್ರೀ ಶೆಜ್ಜೇಶ್ವರ ದೇವಸ್ಥಾನದ ಆವರಣದಲ್ಲಿ ಜ.21ರಂದು ನೂತನ ದೇವಾಲಯ ನಿರ್ಮಾಣದ ಕುರಿತು ಚರ್ಚಿಸಲು ವಿಶೇಷ ಸಭೆಯನ್ನು ಕರೆಯಲಾಗಿದೆ.

ಪುರಾಣ ಪ್ರಸಿದ್ಧ ಪಂಚಲಿಂಗ ಕ್ಷೇತ್ರಗಳಲ್ಲಿ ಒಂದಾಗಿರುವ ಶ್ರೀ ಶೆಜ್ಜೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ರಚನೆಯ ಬಗ್ಗೆ, ಸರ್ಕಾರದ ಅನುದಾನ ಪಡೆಯುವ ಬಗ್ಗೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು. ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್, ಶ್ರೀ ಶೆಜ್ಜೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯವರು, ಅರ್ಚಕರು, ವೃತ್ತಿವಾನರು, ದೇವಳಿ ವರ್ಗದವರು ಮತ್ತು ಊರ ನಾಗರಿಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದು ಶ್ರೀ ಶೆಜ್ಜೇಶ್ವರ ಭಕ್ತಾದಿಗಳೆಲ್ಲರೂ ಈ ಸಭೆಯಲ್ಲಿ ಪಾಲ್ಗೊಂಡು ಅಗತ್ಯ ಸಲಹೆ ಸೂಚನೆಗಳನ್ನು ನೀಡುವಂತೆ ಸಮಿತಿಯು ಪ್ರಕಟಣೆಯಲ್ಲಿ ಕೋರಲಾಗಿದೆ.

300x250 AD
Share This
300x250 AD
300x250 AD
300x250 AD
Back to top