ಕಾರವಾರ: ಇಲ್ಲಿನ ಸಂಚಾರಿ ಪೋಲೀಸ್ ಠಾಣೆಯ ವತಿಯಿಂದ ಎನ್‌ಸಿಸಿ ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮದ ಬಗ್ಗೆ ತಿಳಿಸಿಕೊಡಲಾಯಿತು. 30 ವಿದ್ಯಾರ್ಥಿಗಳ ಎರಡು ತಂಡವನ್ನು ರಚಿಸಿ ನಗರದ ಶಿವಾಜಿ ವತ್ತದಲ್ಲಿ ವಾಹನಗಳ ನಿಯಂತ್ರಣ ಮಾಡುವ, ಸಂಚಾರ ದಟ್ಟಣೆ ಉಂಟಾದಾಗ ವಾಹನ ಒಂದು ಭಾಗದ ನಿಲ್ಲಿಸಿ ಮತ್ತೊಂದು ಭಾಗದ ವಾಹನ ಬಿಡುವ ಬಗೆಯನ್ನು ತಿಳಿಸಿದರು. ವಿದ್ಯಾರ್ಥಿಗಳೇ ಸ್ವತಃ ಸಂಚಾರ ನಿಯಂತ್ರಣ ಮಾಡಿ ಅಭ್ಯಾಸ ಮಾಡಿಕೊಂಡರು. ಜೊತೆಗೆ ಹೊಸ ಅನುಭವ ಪಡೆದುಕೊಂಡರು.