ಶಿರಸಿ: ಇಲ್ಲಿನ ಹೊಂಗಿರಣ ಫೌಂಡೇಶನ್ (ರಿ), ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯ ಪುಣ್ಯ ಘಳಿಗೆಯ ಸವಿನೆನಪಿನಲ್ಲಿ ಜ. 22ರ ಸಂಜೆ 3-30ಕ್ಕೆ ಕೋಣೆಸರದ ಗಣಪತಿ ನಿಲಯದಲ್ಲಿ “ರಾಮ ಶ್ರೀರಾಮ” ವಿಶೇಷ ಉಪನ್ಯಾಸ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಡಾ. ಜಿ.ಎ. ಹೆಗಡೆ ಸೋಂದಾ ಹನ್ನೊಂದನೆಯ ವೈಚಾರಿಕ ಕೃತಿ “ನುಡಿಮುತ್ತು ಬಾಯಿ ತುತ್ತು” ಗ್ರಂಥವನ್ನು ಲೇಖಕರ ಮಾತೋಶ್ರೀ ಜ್ಞಾನವೃದ್ಧೆ ಮಾದೇವಿ ಅ. ಹೆಗಡೆ ಲೋಕಾರ್ಪಣೆಗೊಳಿಸಲಿದ್ದಾರೆ. ಹಿರಿಯ ಲೇಖಕ ಕ.ಸಾ.ಪ. ಶಿರಸಿ ಮಾಜಿ ಅಧ್ಯಕ್ಷ ಮನೋಹರ ಮಲ್ಮನೆ ಅತಿಥಿಯಾಗಿ ಪುಸ್ತಕ ಪರಿಚಯಿಸಲಿದ್ದಾರೆ. ಹೊಂಗಿರಣ ನಿರ್ದೇಶಕ ಲೈನ್ ಗುರುರಾಜ ಹೊನ್ನಾವರ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು ಸಾಹಿತ್ಯ ಸಂಚಲನದ ಅಧ್ಯಕ್ಷ ಕವಿ ಕೃಷ್ಣ ಪದಕಿ ಅಧ್ಯಕ್ಷತೆ ವಹಿಸಲಿದ್ದಾರೆ. ನಿವೃತ್ತ ಪ್ರಾಚಾರ್ಯ, ಲೇಖಕ, ಯಕ್ಷಗಾನ ವಿದ್ವಾಂಸ ಡಾ. ಜಿ. ಎ. ಹೆಗಡೆ ಸೋಂದಾ ಅವರಿಂದ ರಾಮೋಪಾಸನೆಯ ಅಂಗವಾಗಿ “ರಾಮ ಶ್ರೀರಾಮ” ಉಪನ್ಯಾಸ ನಡೆಯಲಿದೆ.