ಸಿದ್ದಾಪುರ: ಸಿದ್ದಾಪುರ ತಾಲೂಕಿನ ಜೆಸಿಬಿ ಮತ್ತು ಹಿಟಾಚಿ ಸಂಘ (ರಿ)ದವರು ಪ್ರವಾಸಿ ಮಂದಿರದಲ್ಲಿ ಸಭೆ ಸೇರಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು. ತಾಲೂಕು ಸಂಘದ ಅಧ್ಯಕ್ಷರಾಗಿ ಬೇಡ್ಕಣಿಯ ಈರಪ್ಪ ಡಿ.ನಾಯ್ಕ, ಉಪಾಧ್ಯಕ್ಷರಾಗಿ ಕುಣಜಿಯ ವಿನಯ ದಾನಶೇಖರ ಗೌಡರ, ಕಾರ್ಯದರ್ಶಿಯಾಗಿ ಕಲ್ಕೈನ ಗಣೇಶ ಪರಮೇಶ್ವರ ಭಟ್, ಖಜಾಂಚಿಯಾಗಿ ಹಾರ್ಸಿಕಟ್ಟಾ ವಾಜಗದ್ದೆಯ ಪ್ರಶಾಂತ ಸುಬ್ರಾಯ ನಾಯ್ಕ, ಸದಸ್ಯರುಗಳಾಗಿ ವಿನಾಯಕ ಕೆ.ಆರ್.ಕೋಲಸಿರ್ಸಿ, ಲೋಕೇಶ ಐ.ಮಡಿವಾಳ, ಗಣೇಶ ಭಟ್ ದೊಡ್ಮನೆ, ಬಾಬಣ್ಣ ಗ್ಯಾರೇಜ್ ಸಿದ್ದಾಪುರ, ಸುರೇಶ ಅಳಗೋಡ,ವಿದ್ಯಾನಂದ ಕಾಳೆನಳ್ಳಿ, ಯಶವಂತ ಗೋಳಗೊಡ, ರಾಜು ಕತ್ತಿ ಕೋಲಸಿರ್ಸಿ, ಪ್ರಶಾಂತ ನಾಯ್ಕ ಬೇಡ್ಕಣಿ, ಶಿವರಾಮ ಎಮ್. ನಾಯ್ಕ, ಮುಂಡಿಗೆತಗ್ಗು, ದಿನೇಶ ಎನ್. ನಾಯ್ಕ ಸಿದ್ದಾಪುರ ಆಯ್ಕೆಯಾಗಿದ್ದಾರೆ.