Slide
Slide
Slide
previous arrow
next arrow

ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮನಗುಳಿಯ ಅಕ್ಷಯ ಶೆಟ್ಟಿ

300x250 AD

ಅಂಕೋಲಾ: ರಾಮಭಕ್ತರಾದ ತಾಲೂಕಿನ ರಾಮನಗುಳಿಯ ಕ್ರಿಯಾಶೀಲ ಯುವಕ ಅಕ್ಷಯ ಶೆಟ್ಟಿ ಇತ್ತೀಚೆಗೆ ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆಯ ರಾಮಜನ್ಮಭೂಮಿ ಸ್ಥಳಕ್ಕೆ ತೆರಳಿ ಒಂದು‌ ದಿನದ ಸೇವೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ತಾಲೂಕಿನಲ್ಲಿ ಪೋಲಿಸ್ ಕ್ವಾಟ್ರಸ್ ಹೊರತುಪಡಿಸಿದರೆ ಏಕೈಕ ರಾಮ ದೇವಸ್ಥಾನ ಇರುವುದು ಸುಂಕಸಾಳ ಪಂಚಾಯತ್ ವ್ಯಾಪ್ತಿಯ ರಾಮನಗುಳಿಯಲ್ಲಿ ಮಾತ್ರ. ದಶಕಗಳಿಂದ ರಾಮನಗುಳಿಯಲ್ಲಿ ಶ್ರೀರಾಮನ ಪಾದುಕೆಗೆ ಪೂಜೆ ನಡೆಯುತ್ತ ಬಂದಿದೆ. ಈ ನಿಟ್ಟಿನಲ್ಲಿ ರಾಮನ ಹೆಸರಿನ ಊರಿನವರಾದ ನಾವು ಆತನ ಜನ್ಮಸ್ಥಳದ ದರ್ಶನವನ್ನು ಮಾಡಿರುವುದು ನಮ್ಮ ಪುಣ್ಯ ಎಂದು ಅಕ್ಷಯ ಅಭಿಪ್ರಾಯ ಪಟ್ಟಿದ್ದಾರೆ.

500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಗರ್ಭಗುಡಿಯ ಕಾರ್ಯ ಪೂರ್ಣಗೊಂಡು ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ಕೆ ಭರದ ಸಿದ್ಧತೆ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ರಾಮನಗುಳಿಯ ಅಕ್ಷಯ ಶೆಟ್ಟಿ ಅಯೋಧ್ಯೆಗೆ ಭೇಟಿ ನೀಡಿ ಅಲ್ಲಿನ ಜನಜೀವನ, ಆಹಾರ ಪದ್ಧತಿ, ಸಂಸ್ಕೃತಿಯ ಕುರಿತು ಅಧ್ಯಯನ ನಡೆಸಿ ಬಂದಿದ್ದಾರೆ. ಅಯೋಧ್ಯೆಯ ಕರಸೇವಕಪುರಂ ಎಂಬ‌ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬೇಕಾಗುವ ಕಂಬಗಳ ಕೆತ್ತನೆ ಕೆಲಸ ನಡೆಯುತ್ತಿದೆ. ಇಲ್ಲಿ ಒಂದು ದಿನದ ಮಟ್ಟಿಗೆ ತನ್ನ ಕೈಲಾದ ಸೇವೆಯನ್ನು ಸಲ್ಲಿಸಿ ಬಂದಿದ್ದೇನೆ ಎಂದು ಅಕ್ಷಯ ಶೆಟ್ಟಿ ಅವರು ಧನ್ಯತಾ ಭಾವವನ್ನು ವ್ಯಕ್ತಪಡಿಸಿದ್ದಾರೆ.

300x250 AD

ನಮ್ಮೂರು ರಾಮನಗುಳಿ. ಇಲ್ಲಿ ಶ್ರೀರಾಮನ ಪಾದುಕೆಗೆ ನಿತ್ಯ ಪೂಜೆ‌ ನಡೆಯುತ್ತದೆ. ಅಷ್ಟೇ ಅಲ್ಲದೇ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಪ್ರದೇಶ ಇದು. ಈ ಊರಿನಿಂದ ಅಯೋಧ್ಯೆಯ ರಾಮಜನ್ಮಭೂಮಿ ಮಂದಿರಕ್ಕೆ ತೆರಳಿ ಮಂದಿರ ನಿರ್ಮಾಣ ಕಾರ್ಯದಲ್ಲಿ ನಮ್ಮದು ಚಿಕ್ಕ ಸೇವೆ ನೀಡಿರುವುದು ನನ್ನ ಜೀವಮಾನದ ಪುಣ್ಯದ ಕೆಲಸ ಎಂದು ಭಾವಿಸುವೆ.

  • ಅಕ್ಷಯ ಶೆಟ್ಟಿ ರಾಮನಗುಳಿ
Share This
300x250 AD
300x250 AD
300x250 AD
Back to top