Slide
Slide
Slide
previous arrow
next arrow

ಜ.22ಕ್ಕೆ ಛತ್ರಪತಿ ಶಿವಾಜಿಮೂರ್ತಿ ಆವರಣದಲ್ಲಿ ವಿಶೇಷ ಕಾರ್ಯಕ್ರಮ

300x250 AD

ದಾಂಡೇಲಿ : ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ನಿಮಿತ್ತ ನಗರದಲ್ಲಿ ಶ್ರೀ ಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಠಾಪನಾ ಸಮಿತಿ ಮತ್ತು ಗಾಂಧಿನಗರದ ಶ್ರೀ.ಛತ್ರಪತಿ ಶಿವಾಜಿ ಯುವ ಸೇವಾ ಟ್ರಸ್ಟ್ ಇವರ ಆಶ್ರಯದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಜನವರಿ 22ರಂದು ನಗರದ ಸೋಮಾನಿ ವೃತ್ತದ ಹತ್ತಿರದಲ್ಲಿರುವ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಆವರಣವನ್ನು ವಿದ್ಯುತ್ ದೀಪಗಳಿಂದ ಅಲಂಕಾರಗೊಳಿಸಲಾಗುವುದು. ಅಂದು ಸಂಜೆ 6 ಗಂಟೆಗೆ ಸಂತ ಜ್ಞಾನೇಶ್ವರ ದೇವಸ್ಥಾನದ ಸಂತರಿಂದ ಶ್ರೀ ಶಿವಾಜಿ ಮೂರ್ತಿಗೆ ಆರತಿ ಬೆಳಗಿ ಪೂಜಿ ಸಲ್ಲಿಸಿದ ಬಳಿಕ ಪ್ರಸಾದ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದೆಂದು ಶ್ರೀ.ಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಠಾಪನಾ ಸಮಿತಿ ಹಾಗೂ ಶ್ರೀ ಶಿವಾಜಿ ಯುವ ಸೇವಾ ಟ್ರಸ್ಟ್ ತಿಳಿಸಿದೆ.

300x250 AD

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಬುದ್ಧಿವಂತ ಗೌಡ ಪಾಟೀಲ್, ಪ್ರಮುಖರಾದ ಸಂತೋಷ್ ಸೋಮನಾಚೆ, ಕೃಷ್ಣ ಗೌಡ, ವಿಜಯ್ ಮಿರಾಶಿ, ಶ್ರೀನಾಥ್ ಮಿರಾಶಿ, ಚಂದನ್ ಮೋರೆ ಹಾಗೂ ಸಂಘಟನೆಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top