ದಾಂಡೇಲಿ: ಕೇಂದ್ರ ಸರಕಾರ ಪ್ರಸ್ತಾಪಿಸಿರುವ ಅಪಘಾತದ ವೇಳೆಯ ಹಿಟ್ & ರನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಚಾಲಕರಿಗೆ ಶಿಕ್ಷೆ ವಿಧಿಸುವ ವಿಧೇಯಕವನ್ನು ವಿರೋಧಿಸಿ ರಾಷ್ಟ್ರದಾದ್ಯಂತ ನಡೆಯಲಿರುವ ಮುಷ್ಕರವನ್ನು ಬೆಂಬಲಿಸಿ ಜ:17 ರಂದು ದಾಂಡೇಲಿಯಲ್ಲಿ ಖಾಸಗಿ ಪ್ರಯಾಣಿಕ ಮತ್ತು ವಾಣಿಜ್ಯ ಸೇವೆ ವಾಹನಗಳ ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ರಾಜ್ಯ ಅಸಂಘಟಿತ ಕಾರ್ಮಿಕರ ಸಂಘಟನೆಯ ಅಧ್ಯಕ್ಷರಾದ ರಾಜೇಸಾಬ್ ಕೇಸನೂರ್ ಅವರು ಹೇಳಿದರು.
ಅವರು ಮಂಗಳವಾರ ನಗರದ ಅಸಂಘಟಿತ ಕಾರ್ಮಿಕರ ಸಂಘಟನೆಯ ಕಾರ್ಯಾಲಯದಲ್ಲಿ ಖಾಸಗಿ ಪ್ರಯಾಣಿಕ ಮತ್ತು ವಾಣಿಜ್ಯ ಸೇವಾ ವಾಹನಗಳ ಸಂಘಟನೆಯ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡುತ್ತಿದ್ದರು. ನಾಳೆ ದಾಂಡೇಲಿ ನಗರದಲ್ಲಿ ಆಟೋ, ಟ್ಯಾಕ್ಸಿ ಹಾಗೂ ಇನ್ನಿತರ ಖಾಸಗಿ ಪ್ರಯಾಣಿಕ ವಾಹನಗಳು ಮತ್ತು ಖಾಸಗಿ ವಾಣಿಜ್ಯ ಸೇವಾ ವಾಹನಗಳ ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸಾರ್ವಜನಿಕರು ಸಹಕರಿಸುವಂತೆ ಮನವಿಯನ್ನು ಮಾಡಿದ್ದಾರೆ
ಈ ಸಂದರ್ಭದಲ್ಲಿ ಖಾಸಗಿ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳ ಸಂಘಟನೆಗಳ ಪ್ರಮುಖರುಗಳಾದ ಪ್ರಮುಖರಾದ ಮುಸ್ತಾಫ ಹಕೀಂ, ನಾಗೇಶ ವಾಲೀಕರ , ಆನಂದ ಕುಮಾರ, ಇಲಿಯಾಸ್ , ರಮೇಶ ಭಂಡಾರಿ, ಬಾಬಾ ಅಕ್ಬರ್ ಮನಿಯಾರ, ಗೌಸ ಕಿತ್ತೂರ, ಬಾಬಾಸಾಬ ಜಮಾದಾರ , ಅಶೋಕ ಬಸವರಾಜ ಪಾಟೀಲ, ಮಕ್ತುಂ ಕಿತ್ತೂರ, ಮೆಹಬೂಬ ಹಾಗೂ ಸಂಘಟನೆಯ ಪಧಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.