ಶಿರಸಿ: ಶಿರಸಿಯಲ್ಲಿ ಹಲವು ಸಾಮಾಜಿಕ ಸೇವಾ ಕಾರ್ಯಗಳು ನಡೆಯುತ್ತಿವೆ. ಸಾಯಿ ಭಕ್ತನಾಗಿ, ಭಗವದ್ಗೀತೆಯ ಪಠಣ ಮಾಡುತ್ತ ನನ್ನ ನಿವೃತ್ತಿ ಜೀವನದಲ್ಲಿಇದ್ದೇನೆ. ಮಾನವೀಯ ಸೇವೆ ಮಾಡುವ ಅಜಿತ ಮನೋಚೇತನಾ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ. ಗೀತಾ ಪ್ರಚಾರವನ್ನು ರಾಜ್ಯದೆಲ್ಲೆಡೆ ನಡೆಸುವ ಪೂಜ್ಯ ಸ್ವರ್ಣವಲ್ಲೀ ಸ್ವಾಮೀಜಿ ಅವರು ಬಹು ದೊಡ್ಡ ಸಾಧನೆ ಮಾಡಿದ್ದಾರೆ. ಶಿರಡಿ ಸಾಯಿಬಾಬಾ ಅವರಂಥ ಮಹಾತ್ಮರಿಂದ ನಮ್ಮ ದೇಶ ಪಾವನವಾಗಿದೆ”. ಎಂದು ಹಿರಿಯ ಸಾಮಾಜಿಕ, ಧಾರ್ಮಿಕ ಕಾರ್ಯಕರ್ತ ನಾರಾಯಣ ಅಂಕೋಲೆಕರ ಅಭಿಪ್ರಾಯ ಪಟ್ಟಿದ್ದಾರೆ.
ಜ.15 ಮಕರ ಸಂಕ್ರಾಂತಿ ದಿನದಂದು ಶಿರಸಿಯಲ್ಲಿ ವಾಸವಾಗವಿರುವ ನಾರಾಯಣ ಅಂಕೋಲೆಕರ ನಿವಾಸಕ್ಕೇ ಹೋಗಿ ವಯೋವೃದ್ಧರಾಗಿರುವ ಅಂಕೋಲೆಕರ್ ಅವರನ್ನು ಅಜಿತ ಮನೋಚೇತನಾ ಪಧಾಧಿಕಾರಿಗಳು ಸನ್ಮಾನ ಮಾಡಿದರು. ಈ ಸಂದರ್ಭ ಅಜಿತ ಮನೋಚೇತನಾ ಅಧ್ಯಕ್ಷ ಸುಧೀರ ಭಟ್, ನಾರಾಯಣ ವಿ .ಅಂಕೋಲೆಕರ್ ಕೊಡುಗೆಗಳನ್ನು ನೆನಪಿಸಿದರು. ಸಾಯಿ ಮಂದಿರ ಸ್ಥಾಪಕರಲ್ಲಿಒಬ್ಬರು, ಅಂಗವಿಕಲ ಸೇವಾ ಸಂಸ್ಥೆಯ ನಿರ್ದೇಶಕರಾಗಿದ್ದರು. ಸರ್ಕಾರದಲ್ಲಿಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು, ಅಜಿತ ಮನೋಚೇತನಾದ ಹಿತೈಷಿಗಳು ಹಾಗೂ ದಾನಿಗಳಾಗಿದ್ದಾರೆ. ಎಂದು ಅಭಿನಂದನೆ ಹೇಳಿದ್ದಾರೆ. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಅನಂತ ಹೆಗಡೆ ಅಶೀಸರ ಇತರ ಪದಾಧಿಕಾರಿಗಳು, ಅಂಕೋಲೆಕರ್ ಕುಟುಂಬ ಸದಸ್ಯರು ಪಾಲ್ಗೊಂಡರು. ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿರುವ ಅಂಕೋಲೆಕರ್ ಅವರಿಗೆ ಅಜಿತ ಮನೋಚೇತನಾ ಧನ್ಯವಾದ ತಿಳಿಸಿದೆ.