Slide
Slide
Slide
previous arrow
next arrow

ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ದರ್ಶನ ಹೆಗಡೆಗೆ ಗೌರವ ಸನ್ಮಾನ

300x250 AD

ಸಿದ್ದಾಪುರ: ತಾಲೂಕಿನ ವಾಜಗದ್ದೆ ಸಮೀಪದ ವಾಟೆಹಕ್ಲುವಿನ ದರ್ಶನ ಎಂ.ಹೆಗಡೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಆಯ್ಕೆ ಆಗಿರುವುದರಿಂದ ಮೆಚ್ಚುಗೆ ವ್ಯಕ್ತಪಡಿಸಿ ಅವರನ್ನು ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಊರವರು ಗೌರವಿಸಿದರು.

ದೇವಸ್ಥಾನದ ಮೊಕ್ತೇಸರ ಶ್ರೀಧರ ಎಂ.ಹೆಗಡೆ ಪೇಟೇಸರ, ಕಾರ್ಯದರ್ಶಿ ರಾಜಾರಾಮ ಹೆಗಡೆ, ಪ್ರಮುಖರಾದ ಗೋಪಾಲ ಹೆಗಡೆ ಹುಲಿಮನೆ, ಗೋಪಾಲ ಹೆಗಡೆ ವಾಜಗದ್ದೆ, ದೇವಸ್ಥಾನದ ಅರ್ಚಕ ಶಿವರಾಮ ಜೋಶಿ, ಎಸ್.ಎಂ.ಭಟ್ಟ ಎಲೆಸರ, ಪಿ.ವಿ.ಹೆಗಡೆ ಹೊಸಗದ್ದೆ, ಅನಂತ ಹೆಗಡೆ ಹೊಸಗದ್ದೆ, ಶ್ರೀಧರ ಹೆಗಡೆ ವಾಟೇಹಕ್ಲು, ಶ್ರೀಪಾದ ಹೆಗಡೆ ಕಲ್ಮನೆ, ದೇವರು ಭಟ್ಟ ಅಬ್ಬಿಗದ್ದೆ,ದೇವಸ್ಥಾನದ ಹಾಗೂ ಯುವಕ ಮಂಡಳಿಯ ಸದಸ್ಯರು, ಊರವರಿದ್ದರು. ಗೌರವವನ್ನು ಸ್ವೀಕರಿಸಿ ದರ್ಶನ ಹೆಗಡೆ ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.

300x250 AD
Share This
300x250 AD
300x250 AD
300x250 AD
Back to top