Slide
Slide
Slide
previous arrow
next arrow

ಗರ್ಭೀಣಿಯರು ಆರೋಗ್ಯದ ಬಗ್ಗೆ ನಿಷ್ಕಾಳಜಿ ತೋರಿಸಬಾರದು: ಡಾ ಕೃಷ್ಣಾ ಜಿ

300x250 AD

ಹೊನ್ನಾವರ : ತಾಯಿ ಮತ್ತು ಮಗುವಿನ ಸುರಕ್ಷಿತ ಆರೋಗ್ಯದ ಕಾರಣಕ್ಕಾಗಿ ಸರಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಸ್ತ್ರೀ ರೋಗ ತಜ್ಞರಾದ ಡಾ. ಕೃಷ್ಣಾ ಜಿ ಹೇಳಿದರು.

ಅವರು ತಾಲೂಕಾ ಆಸ್ಪತ್ರೆ ಹೊನ್ನಾವರದಲ್ಲಿ, ಆರೋಗ್ಯ ಇಲಾಖೆ ಮತ್ತು ಕರ್ನಾಟಕ ಏಡ್ಸ್ ಪ್ರಿವೆನಷನ್ ಸೊಸೈಟಿ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಪ್ರಧಾನಮಂತ್ರಿ ಸುರಕ್ಷ ಮಾತೃತ್ವ ಅಭಿಯಾನದ ಸೀಮಂತ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು.

೨೦೩೦ರ ವೇಳೆಗೆ ಹೆಚ್.ಐ.ವಿ ಮುಕ್ತ ಭಾರತ ಮಾಡುವ ನಿಟ್ಟಿನಲ್ಲಿ ಎಲ್ಲ ಗರ್ಭೀಣಿಯರನ್ನು ಹೆಚ್.ಐ.ವಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಗರ್ಭೀಣಿಯನ್ನು ಸಕಾಲದಲ್ಲಿ ಹೆಚ್.ಐ.ವಿ ಪರೀಕ್ಷೆ ಮಾಡಿಸಿಕೊಂಡರೆ ಮುಂದೆ ಮಗುವಿಗೆ ಹೆಚ್.ಐ.ವಿ ಬರುವದನ್ನು ತಪ್ಪಿಸಬಹುದಾಗಿದೆ. ಎಲ್ಲ ಆರೋಗ್ಯ ಕಾರ್ಯಕರ್ತೆಯರು ಗರ್ಭೀಣಿ ಸ್ತ್ರೀಯರಿಗೆ ಸರಿಯಾದ ಮಾಹಿತಿ ನೀಡಿ ಎಲ್ಲ ರೀತಿಯ ಪರೀಕ್ಷೆಗಳನ್ನು ಸರಕಾರಿ ಆಸ್ಪತ್ರೆಗಳಲ್ಲಿ ಮಾಡಿಸಬೇಕು. ಗರ್ಭೀಣಿಯರು ಆರೋಗ್ಯ ಬಗ್ಗೆ ನಿಷ್ಕಾಳಜಿ ತೋರಿಸಬಾರದು ಎಂದರು.

ಪ್ರಾಸ್ತವಿಕ ಮಾತುಗಳನ್ನಾಡಿದ ತಾಲೂಕ ಆರೋಗ್ಯಾಧಿಕಾರಿಗಳಾದ ಡಾ. ಉಷಾ ಹಾಸ್ಯಗಾರ, ಗರ್ಭೀಣಿಯರ ಆರೋಗ್ಯ ಕಾಳಜಿಗಾಗಿ ಆರೋಗ್ಯ ಇಲಾಖೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ತಾಯಿಯಿಂದ ಮಗುವಿಗೆ ಯಾವುದೇ ಖಾಯಿಲೆಗಳು ಬರದಂತೆ ತಡೆಗಟ್ಟಲು ಮುಂಜಾಗೃತಾ ಕ್ರಮಗಳನ್ನು ಆರೋಗ್ಯ ಇಲಾಖೆ ಕೈಗೊಂಡಿದೆ. ನಮ್ಮ ಈ ಕಾರ್ಯಕ್ಕೆ ಗರ್ಭೀಣಿಯರ ಸಹಕಾರ ಅಗತ್ಯ. ವೈದ್ಯರು ಸೂಚಿಸಿದ ಪರೀಕ್ಷೆಗಳನ್ನು ಸಕಾಲದಲ್ಲಿ ಮಾಡಿಸಿಕೊಳ್ಳುವದರ ಮೂಲಕ ಮಗುವಿಗೆ ಬರಬಹುದಾದ ತೊಂದರೆಗಳನ್ನು ತಪ್ಪಿಸಬಹುದಾಗಿದೆ. ಹೆಚ್.ಐ.ವಿ ಪರೀಕ್ಷೆಗಳನ್ನು ಸರಕಾರಿ ಆಸ್ಪತ್ರೆಗಳಲ್ಲಿ ಮಾಡಿಸಿಕೊಳ್ಳುವುದು ಉತ್ತಮ. ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ಆರೋಗ್ಯ ಇಲಾಖೆ ನಿಮ್ಮ ಜೊತೆ ಸದಾ ಇರುತ್ತದೆ ಹೇಳಲು ಸಂತೋಷವಾಗುತ್ತದೆ. ಎಂದು ಹೇಳಿದರು.

300x250 AD

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಡಳಿತ ವೈದ್ಯಾಧಿಕಾರಿಳಾದ ಡಾ. ರಾಜೇಶ ಕಿಣಿ ಮಾತನಾಡಿ, ರಕ್ತದ ಕೊರತೆ ಕಾಣಿಸಿಕೊಳ್ಳುವ ಗರ್ಭಿಣಿ ಸ್ತ್ರೀಯರು ಮುಂಚಿತವಾಗಿ ಮಾಹಿತಿ ನೀಡಿದರೆ ರಕ್ತ ನಿಧಿ ವಿಭಾಗದಲ್ಲಿ ರಕ್ತದ ಬ್ಯಾಗಗಳು ಇರುವಂತೆ ನೋಡಿಕೊಳ್ಳಲಾಗುವುದು. ಇಂತಹ ಕಾರ್ಯಕ್ರಮಗಳು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಅನೂಕೂಲವಾಗಿದೆ” ಎಂದು ಹೇಳಿದರು.

ದಂತ ವೈದ್ಯರಾಡ ಡಾ. ಅನುರಾಧ, ಸಹಾಯಕ ಆಡಳಿತಾಧಿಕಾರಿ ಶಶಿಕಲಾ ನಾಯ್ಕ ,ಶೂಶ್ರಷಾಧಿಕಾರಿ ಬಾನು ಸೇರಿದಂತೆ ಮಹಿಳಾ ಅಧಿಕಾರಿಗಳು, ಸಿಬ್ಬಂಧಿಗಳು, ಗರ್ಭೀಣಿ ಮಹಿಳೆಯರಿಗೆ ಅರಿಶಿನ ಕುಂಕುಮ ನೀಡುವುದರ ಮೂಲಕ ಸೀಮಂತ ಕಾರ್ಯಕ್ರಮ ನಡೆಸಿಕೊಟ್ಟರು.

ವೇದಿಕೆಯಲ್ಲಿ ಡಾ. ರಮೇಶ ಗೌಡ ಸೇರಿದಂತೆ ವೈದ್ಯರುಗಳು ಉಪಸ್ಥಿತರಿದ್ದರು. ೪೦ ಕ್ಕೂ ಹೆಚ್ಚು ಗರ್ಭಿಣಿ ಸ್ತ್ರೀ ಯರು ಸೀಮಂತ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ರಾಜ್ಯ ಸರಕಾರಿ ನೌಕರರ ಸಂಘದ ಉಪಾಧ್ಯಕ್ಷರಾದ ಚಂದ್ರಶೇಖರ ಕಳಸ, ಪ್ರಯೋಗ ಶಾಲಾ ತಂತ್ರಜ್ಞರಾದ ದೀಪಾ ನಾಯ್ಕ, ಆಶಾ ನಾಯ್ಕ, ನೀತಿನ ನಾಯ್ಕ, ಆರೋಗ್ಯ ಇಲಾಖೆಯ ಸಿಬ್ಬಂಧಿಗಳಾದ ಸಂಗೀತಾ ಪಟಗಾರ, ವಿದ್ಯಾ ನಾಯ್ಕ, ಮೇರಿ,ಸೇರಿದಂತೆ ಎಲ್ಲ ಸಿಬ್ಬಂಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಸಶ್ವಿಗೆ ಸಹಕರಿಸಿದರು.

Share This
300x250 AD
300x250 AD
300x250 AD
Back to top