Slide
Slide
Slide
previous arrow
next arrow

‘ಗುಲಾಬಿ ಕಂಪಿನ ರಸ್ತೆ’ ಕಥಾ ಸಂಕಲನ ಬಿಡುಗಡೆ

300x250 AD

ಹೊನ್ನಾವರ : ವರ್ತಮಾನದ ತಲ್ಲಣಗಳಿಗೆ ಧ್ವನಿಯಾಗಿರುವ ‘ಗುಲಾಬಿ ಕಂಪಿನ ರಸ್ತೆ’ಯ ಕಥೆಗಳು ಸಮಕಾಲೀನ ಕನ್ನಡ ಕಥೆಗಳಲ್ಲಿ ಪ್ರಮುಖವಾದವು. ಬಹುತೇಕ ಮಹಿಳೆಯರು ತಮ್ಮ ಪ್ರೀತಿಪಾತ್ರರಿಂದಲೇ ಶೋಷಣೆಗೊಳಗಾಗುತ್ತಾರೆ. ಅಂತಹ ಸಂದರ್ಭದಲ್ಲಿ ತಮ್ಮ ಸ್ವಾತಂತ್ರ್ಯ, ಹಕ್ಕುಗಳನ್ನು  ರಕ್ಷಿಸಿಕೊಳ್ಳುತ್ತಲೇ ಕುಟುಂಬ ಜೀವನದಲ್ಲಿ ಬದುಕುವ ಅನಿವಾರ್ಯತೆಗೆ ಒಳಗಾಗುತ್ತಾರೆ ಎಂದು ವಿಮರ್ಶಕಿ, ಕವಿ  ಡಾ.ಭಾರತಿದೇವಿ ಪಿ. ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. 

ಮಾಧವಿ ಭಂಡಾರಿ ಕೆರೇಕೊಣ ಅವರ ‘ಗುಲಾಬಿ ಕಂಪಿನ ರಸ್ತೆ’ ಕಥಾ ಸಂಕಲನವನ್ನು ಕನ್ನಡ ಸಾಹಿತ್ಯ ಪರಿಷತ್ತು ಹೊನ್ನಾವರ ತಾಲೂಕು ಘಟಕ, ಸಹಯಾನ ಕೆರೆಕೋಣ ಮತ್ತು ಸರ್ಕಾರಿ ಪ್ರಥಮದರ್ಜೆ ಕಾಲೇಜು ಹೊನ್ನಾವರ ಇವುಗಳ ಸಂಯುಕ್ತ ಆಶ್ರಯದಲ್ಲಿ  ಇತ್ತೀಚೆಗೆ ಹೊನ್ನಾವರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.

ಪುಸ್ತಕ ಪರಿಚಯಿಸಿ ಮಾತನಾಡಿದ ಕವಿ ಮತ್ತು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕಾವ್ಯಶ್ರೀ ನಾಯ್ಕ ಮನಮನೆ ಅವರು, ಇಲ್ಲಿಯ ಕತೆಗಳಿಗೆ ಕಾವ್ಯದ ಲಯವಿದೆ, ಸುತ್ತಲಿನ ಸಮಸ್ಯೆಗಳಿಗೆ ದಿಟ್ಟವಾಗಿ ಪ್ರತಿಕ್ರಿಯಿಸುವ ಕಥೆಗಳು ಕೆಲವೊಮ್ಮೆ ಓದುಗರನ್ನು ಕಂಗೆಡಿಸಿ ಬಿಡುವಷ್ಟು ತೀವ್ರವಾಗಿ ಮೂಡಿ ಬಂದಿವೆ  ಎಂದರು.

ಅತಿಥಿಗಳಾಗಿ  ಆಗಮಿಸಿದ್ದ ಡಾ.ಎನ್.ಆರ್.ನಾಯಕ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಒಳ್ಳೆಯ ಅಭಿರುಚಿಯ ಓದಿಗೆ ಹೊಸ ತಲೆಮಾರು ತೆರೆದುಕೊಳ್ಳಬೇಕು ಎಂದರೆ ಶಾಂತಿ ನಾಯಕ ಮಾತನಾಡಿ  ಮಹಿಳೆಯರು ಜಾಗೃತ ಪ್ರಜ್ಞೆ ಹೊಂದಿದಾಗ ಮಾತ್ರವೇ ಶೋಷಣೆಯಿಂದ ಮುಕ್ತರಾಗಲು ಸಾಧ್ಯ ಎಂದರು. ಇನ್ನೋರ್ವ ಅತಿಥಿಗಳಾಗಿದ್ದ ಡಾ.ಎಸ್.ಡಿ. ಹೆಗಡೆ ಸಮಾಜದಲ್ಲಿ ಸತ್ಯವನ್ನು ಸ್ವೀಕರಿಸುವ ಮನಸ್ಥಿತಿ ಇಂದು ಇಲ್ಲವಾಗಿದೆ. ಸುಳ್ಳುಗಳನ್ನು ಪುರಸ್ಕರಿಸುವ ಜನ ಸತ್ಯವನ್ನು ಸ್ವೀಕರಿಸುವುದಿಲ್ಲ ಎಂದರು.

300x250 AD

ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಸ್. ಎಚ್ ಗೌಡ  ಶುಭ ಹಾರೈಸಿದರು. ಪ್ರಭಾರ ಪ್ರಾಚಾರ್ಯರಾದ ಡಾ. ಶಬಾನಾ ಯಾಸ್ಮಿನ್ ಶೇಖ್ ಅಧ್ಯಕ್ಷತೆ ವಹಿಸಿ ಪುಸ್ತಕ ಸಂಸ್ಕೃತಿ ಪಸರಿಸಲು, ಓದಲು ಮತ್ತು ಓದಿಸಲು, ಬರಹಗಾರರನ್ನು ಪ್ರೋತ್ಸಾಹಿಸಲು ಕರೆ ನೀಡಿದರು.

ಬಂಡಾಯ ಪ್ರಕಾಶನದ ಪರವಾಗಿ ಯಮುನಾ ಗಾಂವ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಕಲನದ ಕಥೆಗಾರ್ತಿ ಮಾಧವಿ ಭಂಡಾರಿ ಕಥೆಗಳ ಹುಟ್ಟಿನ ಕುರಿತು ಮಾತನಾಡಿದರು. ಪದವಿ ಕಾಲೇಜು ವಿದ್ಯಾರ್ಥಿಗಳಾದ ಲಿಖಿತ ಮತ್ತು ಪೃಥ್ವಿ ನಿರ್ವಹಿಸಿದರು. ಕಾರ್ಯಕ್ರಮ ಮಧ್ಯೆ ವಿದ್ಯಾರ್ಥಿಗಳು ಕುವೆಂಪು ರಚಿಸಿದ ಕೆಲವು  ಕವನಗಳನ್ನು ಹಾಡಿದರು.

Share This
300x250 AD
300x250 AD
300x250 AD
Back to top