Slide
Slide
Slide
previous arrow
next arrow

ಜ.11ರಂದು ದಾಂಡೇಲಿಗೆ ಪರ್ತಗಾಳಿ ಶ್ರೀ ಪುರಪ್ರವೇಶ

300x250 AD

ದಾಂಡೇಲಿ : ಶ್ರೀಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಪರಮ ಪೂಜ್ಯ ಗುರುವರ್ಯ ಶ್ರೀ ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರು ಜ: 11ರಂದು ದಾಂಡೇಲಿಗೆ ಪುರಪ್ರವೇಶ ಮಾಡಲಿದ್ದಾರೆ.

ಸಂಜೆ 6:00ಗೆ ದಾಂಡೇಲಿ ನಗರದ ಸೋಮಾನಿ ವೃತ್ತದಲ್ಲಿ ಪೂಜ್ಯ ಸ್ವಾಮೀಜಿಯವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿ ಭವ್ಯ ಮೆರವಣಿಗೆಯೊಂದಿಗೆ ಕುಳಗಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಗುತ್ತದೆ. ಜನವರಿ 12 ರಿಂದ 15 ರವರೆಗೆ ಶ್ರೀ.ಲಕ್ಷ್ಮಿ ವೆಂಕಟರಮಣ ದೇವಸ್ಥಾನ ಹಾಗೂ ದೇವಸ್ಥಾನದ ಆವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.‌

ಈ ದಿನಗಳಂದು ಪ್ರತಿದಿನ ಬೆಳಿಗ್ಗೆ 07 ಗಂಟೆಗೆ ಶ್ರೀರಾಮದೇವ ವೀರ ವಿಠ್ಠಲ ದೇವರ ನೈರ್ಮಲ್ಯ ವಿಸರ್ಜನಾ ಪೂಜೆ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಮಧ್ಯಾಹ್ನ 12:30 ಗಂಟೆಗೆ ಶ್ರೀಲಕ್ಷ್ಮಿ ವೆಂಕಟರಮಣ ದೇವರ ಮಹಾಪೂಜೆ ಹಾಗೂ ಮಹಾಪ್ರಸಾದ ವಿತರಣೆ ನಡೆಯಲಿದೆ. ಜನವರಿ 12ರಂದು ಸಂಜೆ 5:30 ಗಂಟೆಗೆ ಧಾರವಾಡದ ಪ್ರಸಾದ್ ಪ್ರಭು ಹಾಗೂ ಸಂಗಡಿಗದಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಜನವರಿ 13ರಂದು ಶಿರಸಿಯ ಪಂಡಿತ್ ಶ್ರೀ.ನಾರಾಯಣ ದಾಸ ಇವರಿಂದ ಹರಿಕಥೆ ನಡೆಯಲಿದೆ. ಜನವರಿ 14ರಂದು ಧಾರವಾಡದ ಸುಜಯ್ ಶಾನಭಾಗ್ ಹಾಗೂ ಬಳಗದವರಿಂದ ಚಿಂತನ ರಾಮಾಯಣ ಕಾರ್ಯಕ್ರಮ ಜರುಗಲಿದೆ.

300x250 AD

ಜನವರಿ 15ರಂದು ವಿವಿಧ ಪೂಜಾ ಕಾರ್ಯಕ್ರಮಗಳು ನಡೆದ ಬಳಿಕ ಸಂಜೆ ಐದು ಗಂಟೆಗೆ ಪೂಜ್ಯರ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮದ ಜೊತೆಯಲ್ಲಿ ಪೂಜ್ಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ಸ್ವಾಮೀಜಿಯವರಿಂದ ಪ್ರವಚನ ಕಾರ್ಯಕ್ರಮ ಜರುಗಲಿದೆ. ಐದು ದಿನಗಳ ಈ ಭವ್ಯ ಕಾರ್ಯಕ್ರಮಕ್ಕೆ ಈಗಾಗಲೇ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನ ಶ್ರೀವಿದ್ಯಾಧಿರಾಜ ಸಭಾಭವನ ಹಾಗೂ ಆವರಣದಲ್ಲಿ ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ.

Share This
300x250 AD
300x250 AD
300x250 AD
Back to top