Slide
Slide
Slide
previous arrow
next arrow

ಪಿಡಿಒ ಕುಮಾರ್ ವಾಸನಗೆ ‘ಪಿಡಿಒ ಆಫ್ ದಿ ಮಂತ್ ಪ್ರಶಸ್ತಿ’

300x250 AD

ಕಾರವಾರ: ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ಉತ್ತಮ ಕಾರ್ಯನಿರ್ವಹಣೆ ಮೂಲಕ ತಮ್ಮ ಅವಧಿಯಲ್ಲಿ ಮೂರು ಗಾಂಧಿ ಗ್ರಾಮ ಪುರಸ್ಕಾರ ಲಭಿಸಲು ಕಾರಣಿಕರ್ತರಾದ ಶಿರಸಿ ತಾಲ್ಲೂಕಿನ ದೇವನಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕುಮಾರ ಚನ್ನಪ್ಪ ವಾಸನ ಅವರಿಗೆ ಜಿಲ್ಲಾ ಪಂಚಾಯತ್‌ನಿಂದ ಪ್ರತಿ ತಿಂಗಳು ನೀಡಲಾಗುವ ಜಿಲ್ಲಾ ಮಟ್ಟದ ಡಿಸೆಂಬರ್ ತಿಂಗಳ ಪಿಡಿಒ ಆಫ್ ದಿ ಮಂತ್ ಪ್ರಶಸ್ತಿಯನ್ನು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಪ್ರದಾನ ಮಾಡಿ ಅಭಿನಂದಿಸಿದರು.

ಪ್ರಶಸ್ತಿ ಪುರಸ್ಕೃತರಾದ ಪಿಡಿಒ ಕುಮಾರ ವಾಸನ ಮಾತನಾಡಿ, ಗ್ರಾಮೀಣ ಜನರಿಗೆ ಅತೀ ಅವಶ್ಯಕ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತ ಮಹತ್ತರ ಜವಾಬ್ದಾರಿ ಪಿಡಿಒ ಮೇಲಿರುತ್ತದೆ. ಹೀಗಾಗಿ ಪ್ರತಿಯೊಬ್ಬ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕೆಲಸದಲ್ಲಿ ಬದ್ಧತೆ ತೋರುವ ಮೂಲಕ ಮೇಲಾಧಿಕಾರಿಗಳ ಮಾರ್ಗದರ್ಶನ, ಚುನಾಯಿತ ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ಸರಕಾರದ ಜನಪರ ಯೋಜನೆಗಳನ್ನು ನೀತಿ ನಿಯಮಗಳ ಪ್ರಕಾರ ಜನರಿಗೆ ತಲುಪಿಸಲು ಶ್ರಮಿಸಬೇಕು. ಈ ರೀತಿಯ ಕಾರ್ಯ ನಿರ್ವಹಣೆಯಿಂದ ಮಾತ್ರ ಪ್ರಶಸ್ತಿ ಹಾಗೂ ಪುರಸ್ಕಾರಗಳು ಲಭಿಸಲು ಸಾಧ್ಯವಿದೆ. ನನ್ನ ಸೇವೆಯನ್ನು ಗುರುತಿಸಿರುವ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿಗಳ ರವರು ಪ್ರಶಸ್ತಿ ನೀಡಿ ಗೌರವಿಸಿರುವುದು ಸಂತೋಷದ ಜೊತೆಗೆ ಆತ್ಮ ವಿಶ್ವಾಸ ಹೆಚ್ಚಿಸಿದೆ. ನನ್ನ ಇಷ್ಟು ವರ್ಷಗಳ ಕರ್ತವ್ಯದ ಅವಧಿಯಲ್ಲಿ ಸಹಾಯ, ಸಹಕಾರ ನೀಡಿರುವ ವಿವಿಧ ಗ್ರಾಮ ಪಂಚಾಯತಿಗಳ ಜನಪ್ರತಿನಿಧಿಗಳು, ಸಿಬ್ಬಂದಿಗೆ ಹಾಗೂ ಪ್ರಶಸ್ತಿಗೆ ಪರಿಗಣಿಸಿರುವ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಮೇಲಾಧಿಕಾರಿಗಳಿಗೆ ಧನ್ಯವಾದ ತಿಳಿಸಿದರು. ಜಿಪಂ ಆಡಳಿತ ಶಾಖೆಯ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್ ಉಪಸ್ಥಿತರಿದ್ದರು.

ಕುಮಾರ ವಾಸನ ಡಿಎಡ್, ಬಿಎ ಪದವಿದರರಾಗಿದ್ದು, 2010ರಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಪ್ರಾರಂಭಿಸಿದ್ದಾರೆ. ಇವರು ಶಿರಸಿ ತಾಲ್ಲೂಕಿನ ಹಲವು ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ಪ್ರಸ್ತುತ ದೇವನಳ್ಳಿ ಗ್ರಾಪಂನಲ್ಲಿ ಖಾಯಂ ಹಾಗೂ ಉಂಚಳ್ಳಿ ಗ್ರಾಪಂನ ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಕಾರ್ಯಾವಧಿಯ 2013-14ರಲ್ಲಿ ಬದನಗೋಡಿಗೆ ಗಾಂಧಿ ಗ್ರಾಮ ಪುರಸ್ಕಾರ, 2014-15, 2015-16ರಲ್ಲಿ ಇಟಗುಳಿಗೆ ಸತತ ಎರಡು ಬಾರಿ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ. ಜೊತೆಗೆ ಶೇ. 100ರಷ್ಟು ತೆರಿಗೆ ವಸೂಲಾತಿ ಸಾಧನೆ, ಸಾಮಾಜಿಕ ಪರಿಶೋಧನಾ ಆಕ್ಷೇಪಣೆ ಮತ್ತು ವಸೂಲಾತಿ ಕಂಡಿಕೆಗಳನ್ನು ಶೇ 100ರಷ್ಟು ತಿರುವಳಿಗೊಳಿಸುವ ಕಾರ್ಯಸಾಧನೆ ಮಾಡಿದ್ದಾರೆ. ಪ್ರಸ್ತುತ ದೇವನಳ್ಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕುಮಾರ ವಾಸನ, ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಸಿಬ್ಬಂದಿ ಸಹಕಾರದಿಂದ ಮಹಾತ್ಮಾ ಗಾಂಧಿ ಉದ್ಯೋಗಖಾತ್ರಿ ಯೋಜನೆಯಡಿ ದೇವನಳ್ಳಿ ಪ್ರೌಢ ಶಾಲೆಯಲ್ಲಿ ಆಟದ ಮೈದಾನ, ಕಂಪೌಂಡ್ ಗೋಡೆ, ಪ್ರಾಥಮಿಕ ಶಾಲೆಯಲ್ಲಿ ವಾಲಿಬಾಲ್ ಕೋರ್ಟ್, ಕಂಪೌAಡ ಗೋಡೆ, ಕರೂರು, ಸರಗುಪ್ಪ, ಹಲಸಿನಕಟ್ಟಾ ಶಾಲೆಗಳಿಗೂ ಸಹ ಕಂಪೌಂಡ್ ಗೋಡೆ ನಿರ್ಮಾಣ ಕಾರ್ಯ ಕೈಗೊಂಡಿದ್ದಾರೆ.

300x250 AD

2023-24ನೇ ಸಾಲಿನಲ್ಲಿ ದೇವನಳ್ಳಿಗೆ ನೀಡಲಾಗಿದ್ದ 7785 ಮಾನವ ದಿನಗಳ ಗುರಿ ಸಾಧನೆಗೆ ಪೂರಕವಾಗಿ ಪ್ರಸಕ್ತ ವರ್ಷದ ಜನವರಿ 08 ರ ಅಂತ್ಯಕ್ಕೆ 15153 ಮಾನವ ದಿನಗಳ ಗುರಿ ಸಾಧಿಸಿದ್ದು, ವಾರ್ಷಿಕ ಗುರಿಗೆ ಅನುಗುಣವಾಗಿ ಶೇ 194.64 ರಷ್ಟು ಗುರಿ ಸಾಧಿಸಲಾಗಿದೆ. ಇವರು ಸೇವೆ ಸಲ್ಲಿಸಿರುವ ಸಂದರ್ಭದಲ್ಲಿ ಅತ್ಯಂತ ಮುತುವರ್ಜಿವಹಿಸಿ ಬಂಕನಾಳ, ಶಿವಳ್ಳಿ(ಹೆಗಡೆಕಟ್ಟಾ) ಹಾಗೂ ಉಂಚಳ್ಳಿ ಪಂಚಾಯತದಲ್ಲಿ ನೂತನ ಗ್ರಾಪಂ ಕಟ್ಟಡ ನಿರ್ಮಾಣ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದ್ದಾರೆ.

Share This
300x250 AD
300x250 AD
300x250 AD
Back to top