ಜೋಯಿಡಾ: ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ , ಕೆ,ಎಲ್,ಇ ಬೆಳಗಾವಿ ಸರ್ಕಾರಿ ಆಸ್ಪತ್ರೆ ಜೋಯಿಡಾ ಮತ್ತು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟಿ ಹಳಿಯಾಳ ವತಿಯಿಂದ ಜೊಯಿಡಾದಲ್ಲಿ ಉಚಿತ ಆರೋಗ್ಯ ತಪಾಸಣೆಯ ಶಿಬಿರ ನಡೆಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆ.ಎಲ್.ಇ. ಸಂಸ್ಥೆಯ ಸಹಾಯಕ ಆಡಳಿತಾಧಿಕಾರಿ ಡಾ.ಅಲ್ಲಮಪ್ರಭು ಹಾಗೂ ಶ್ರೀ ವಿ.ಆರ್. ದೇಶಪಾಂಡೆ ಟ್ರಸ್ಟ್ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆ ಹಳಿಯಾಳ, ದಾಂಡೇಲಿ,ಜೋಯಿಡಾ,ತಾಲೂಕುಗಳಲ್ಲಿ ಉಚಿತ ಅರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುತ್ತಿದ್ದು, ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆಯಲು ಕರೆ ನೀಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕುಣಬಿ ಸಮಾಜ ದ ಅಧ್ಯಕ್ಷ ಸುಭಾಸ ಗವಡಾ, ಜೋಯಿಡಾ ತಾಲೂಕಿನ ಜನರಿಗೆ ಉತ್ತಮವಾದ ಪರಿಸರ ಜಲ, ವಾತಾವರಣಗಳಿರುವುದರಿಂದ ಆರೋಗ್ಯದಲ್ಲಿ ಹೆಚ್ಚಿನ ತೊಂದರೆಗಳು, ಬರುವುದಿಲ್ಲ ಆದರೆ ಕೆಲವು ಸಮಸ್ಯೆಗಳಿಗೆ ಕೇವಲ ವೈದ್ಯರಿಂದ ಮಾತ್ರ ಚಿಕಿತ್ಸೆ ನೀಡಲು ಸಾಧ್ಯ ಎಂದು ನುಡಿದರು.ಮುಖ್ಯ ಅಥಿತಿಗಳಾಗಿ, ರಮೇಶ ನಾಯ್ಕ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಭವಾನಿ ಎನ್.ಚವ್ಹಾಣ್ ಇತರರು ಉಪಸ್ಥಿತರಿದ್ದರು. ಅಶೋಕ ಸೂರ್ಯವಂಶಿ ಸ್ವಾಗತಿಸಿದರು. ಮೇಲ್ವಿಚಾರಕ ನಾರಾಯಣ್ ವಾಡ್ಕರ್ , ವಿನಾಯಕ್ ಚೌಹಾಣ್ ಕಾರ್ಯಕ್ರಮ ನಡೆಸಿಕೊಟ್ಟರು.