ಯಲ್ಲಾಪುರ: ಯಲ್ಲಾಪುರ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ಆಯೋಜಿಸಿರುವ, ಟಿ.ಎಂ.ಎಸ್. ಆಲೆಮನೆ ಹಬ್ಬ-2024 ಹಾಗೂ ಗೃಹೋಪಯೋಗಿ ವಸ್ತುಗಳ ವಿಶೇಷ ರಿಯಾಯಿತಿ ಮಾರಾಟ ಜ.10, ಬುಧವಾರದಂದು, ಸಂಜೆ 5 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಇಲ್ಲಿನ ಟಿ.ಎಮ್.ಎಸ್. ಸುಪರ್ ಮಾರ್ಟ್ ಆವಾರದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಯಲ್ಲಾಪುರ ರವೀಂದ್ರನಗರದ ಆದರ್ಶ ಮಹಿಳಾ ಮಂಡಳದವರಿಂದ ಭಗವದ್ಗೀತಾ ಪಠಣ, ಉತ್ತಮ ಕಬ್ಬು ಬೆಳೆಯುವ ಸದಸ್ಯರಾದ ಮೋಹನ್ ಭಟ್, ಹೊನ್ನಳ್ಳಿ, ಗೋಪಾಲ ಕೃಷ್ಣ ಭಟ್ ಹುಲಗೋಡ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ನಂತರದಲ್ಲಿ ಪ್ರಾರ್ಥನಾ ಮೆಲೋಡಿಸ್‌ನ ದೇವೇಂದ್ರ ಹೆಗಡೆ, ಟಿ.ಮಂಜುನಾಥ್, ಶ್ರೀಮತಿ ಲಲಿತಾ ಇವರಿಂದ ‘ಗಾನ ಮಂಜರಿ’ ಕಾರ್ಯಕ್ರಮ ಜರುಗಲಿದೆ.
ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಿ ಪ್ರೋತ್ಸಾಹಿಸಿ, ಕಾರ್ಯಕ್ರಮದ ಉಪಯೋಗ ಪಡೆದುಕೊಳ್ಳುವಂತೆ ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.