ಜೋಯಿಡಾ: ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ ಹೆಸರಿನ ಈ ಸಾಲ ಯೋಜನೆಯನ್ನು ಹಣಕಾಸಿನ ಕೊರತೆಯಿಂದಾಗಿ ತಮ್ಮದೇ ಆದ ಉದ್ಯಮವನ್ನು ಸ್ಥಾಪಿಸಲು ಸಾಧ್ಯವಾಗದಿರುವ ಉತ್ಸಾಹಿಗಳಿಗೆ ಧನಸಹಾಯ ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಸಣ್ಣ ವ್ಯಾಪಾರವನ್ನು ಪ್ರಾರಂಭಿಸುವ ಅಥವಾ ಅಸ್ತಿತ್ವದಲ್ಲಿರುವ ಉದ್ಯಮವನ್ನು ವಿಸ್ತರಿಸಲು ಬಯಸುವ ವ್ಯಕ್ತಿಗಳು,ಸಣ್ಣ ಮತ್ತು ಅತಿ ಸಣ್ಣ ಉದ್ಯಮೆದಾರರು, ವ್ಯಾಪಾರಸ್ತರು ಹೊಸ ಉದ್ಯಮ ಶುರು ಮಾಡಬಹುದು. ಆಹಾರ ಉತ್ಪನ್ನಗಳ ತಯಾರಿ, ಜವಳಿ ಕ್ಷೇತ್ರ, ಸಮುದಾಯ, ಸಾಮಾಜಿಕ, ಸಾರಿಗೆ ವಲಯ ಮತ್ತು ವೈಯಕ್ತಿಕ ಸೇವಾ ಚಟುವಟಿಕೆಗಳಿಗೆ ಸಾಲ ದೊರೆಯುತ್ತದೆ.ಅರ್ಹ ಆಸಕ್ತ ಅಭ್ಯರ್ಥಿಗಳು ಮುದ್ರಾ ಯೋಜನೆಯ ಅಧಿಕೃತ ವೆಬ್ ಸೈಟ್’ಗೆ ಹೋಗಿ ಆನ್ ಲೈನ್ ಮೂಲಕ ಅರ್ಜಿ ಹಾಕಿ ಯೋಜನೆಯ ಲಾಭ ಪಡೆಯಬೇಕೆಂದು ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯ ಧವಳೋ ಸಾವರ್ಕರ್ ವಿನಂತಿಸಿದ್ದಾರೆ.