ಶಿರಸಿ: ಸಾಹಿತ್ಯ ಸಂಚಲನ ಶಿರಸಿ ಮತ್ತು ನಯನ ಫೌಂಡೇಶನ್ ಶಿರಸಿ ಇವರ ಸಹಯೋಗದೊಂದಿಗೆ ಡಾ.ಎಚ್ ಆರ್ ವಿಶ್ವಾಸ ವಿರಚಿತ “ಸಂಗಮ” ಕಾದಂಬರಿಯು ಜ.14, ರವಿವಾರ ಸಂಜೆ 3:30 ಕ್ಕೆ ನಯನ ಸಭಾಂಗಣದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಉದ್ಘಾಟಕರಾಗಿ ಸಂಸ್ಕೃತ ವಿದ್ವಾಂಸರಾದ ರವಿಶಂಕರ ಹೆಗಡೆ ದೊಡ್ನಳ್ಳಿ ಆಗಮಿಸಲಿದ್ದು, ಪರಿಸರ ತಜ್ಞರಾದ ಶಿವಾನಂದ ಕಳವೆ ಕೃತಿ ಲೋಕಾರ್ಪಣೆಗೊಳಿಸುವರು. ಸಾಹಿತಿ ಗಣಪತಿ ಭಟ್ ವರ್ಗಾಸರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕೃತಿಕಾರರಾದ ಡಾ.ಎಚ್.ಆರ್ ವಿಶ್ವಾಸ, ನೇತ್ರ ತಜ್ಞರಾದ ಡಾ|| ಶಿವರಾಮ ಕೆ ವಿ ಮತ್ತು ಸಾಹಿತ್ಯ ಸಂಚಲನದ ಕೃಷ್ಣ ಪದಕಿಯವರು ಗೌರವ ಉಪಸ್ಥಿಯಲ್ಲಿ ವೇದಿಕೆಯನ್ನಲಂಕರಿಸಲಿದ್ದಾರೆ.
ನಂತರದಲ್ಲಿ ರಾಮೋಪಾಸನೆ ಕವಿಗೋಷ್ಠಿ ಜರುಗಲಿದ್ದು, ಕವಿ/ಕವಯಿತ್ರಿಯರಲ್ಲಿ ದಾಕ್ಷಾಯಿಣಿ ಪಿ.ಸಿ., ಶೋಭಾ ವಿ. ಭಟ್, ರಾಜಲಕ್ಷ್ಮಿ ಭಟ್, ದಿನೇಶ ಭಾಗ್ವತ,ರೇಣುಕಾ ಭಟ್, ರಮೇಶ ಹೆಗಡೆ, ಶರಾವತಿ ಭಟ್, ನಾಗರತ್ನ ಲೋಕೇಶ, ಭಾರತಿ ಎಸ್. ಹೆಗಡೆ, ಜಗದೀಶ ಭಂಡಾರಿ, ಜಲಜಾಕ್ಷಿ ಶೆಟ್ಟಿ, ಡಿ. ಎಮ್. ಭಟ್,ಜಯಪ್ರಕಾಶ ಹಬ್ಬು, ಮಹೇಶಕುಮಾರ ಹನಕೆರೆ, ಸಾವಿತ್ರಿ ಶಾಸ್ತ್ರಿ ಮತ್ತು ಮಂಗಳಗೌರಿ ಭಟ್ ಭಾಗವಹಿಸಲಿದ್ದಾರೆ. ಸಂಪೂರ್ಣ ಕಾರ್ಯಕ್ರಮದ ನಿರ್ವಹಣೆಯನ್ನು ಕವಯಿತ್ರಿ, ಕಥೆಗಾರ್ತಿ ಪ್ರತಿಭಾ ಎಂ. ನಾಯ್ಕ ಮಾಡಲಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಾಹಿತ್ಯಾಸಕ್ತರು ಪ್ರಯೋಜನ ಪಡೆದುಕೊಳ್ಳಬೇಕಾಗಿ ವಿನಂತಿಸಲಾಗಿದೆ.