ಶಿರಸಿ: ಭಾರತ ವೇಗವಾಗಿ ಅಭಿವೃದ್ಧಿಯನ್ನು ಹೊಂದುತ್ತಿರುವ ರಾಷ್ಟ್ರ. ನಿಮ್ಮಲ್ಲಿ ಪಠ್ಯ ಜ್ಞಾನವನ್ನು ಹೊರತುಪಡಿಸಿ ಪ್ರಾಯೋಗಿಕ ಜ್ಞಾನ, ಉದ್ಯೋಗಕ್ಕೆ ಅನುಗುಣವಾದ ಕೌಶಲ್ಯ ಇದ್ದರೆ ನಮ್ಮ ದೇಶದಲ್ಲಿ ಉದ್ಯೋಗಕ್ಕೆ ಯಾವುದೇ ಕೊರತೆ ಇಲ್ಲ ಎಂದು ಎಂಎಂ ಕಾಲೇಜಿನ ಪ್ರಾಚಾರ್ಯ ಡಾ. ಟಿ ಎಸ್ ಹಳೆಮನೆ ಹೇಳಿದರು.
ಅವರು ಎಂಇಎಸ್ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ಲೇಸ್ಮೆಂಟ್ ಸೆಲ್ ಹಾಗೂ ದೇಶಪಾಂಡೆ ಫೌಂಡೇಶನ್ ಹುಬ್ಬಳ್ಳಿ ಇವರುಗಳ ಸಯೋಗದಲ್ಲಿ ಹಮ್ಮಿಕೊಂಡಿದ್ದ ಸ್ಕಿಲ್ ಪ್ಲಸ್ ಜಾಬ್ ನೆಕ್ಸ್ಟ್ ಯೋಜನೆ ಅಡಿ ತರಬೇತಿ ಹಾಗೂ ಉದ್ಯೋಗಕ್ಕಾಗಿ ಯುವಕ ಯುವತಿಯರ ಆಯ್ಕೆ ಪ್ರಕ್ರಿಯೆ ಆಪ್ತ ಸಮಾಲೋಚನಾ ಸಭೆಯಲ್ಲಿ ಮಾತನಾಡುತ್ತಿದ್ದರು.
ಮೊದಲು ಉದ್ಯೋಗಕ್ಕೆ ಅನುಗುಣವಾದ ನವ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಹುಬ್ಬಳ್ಳಿಗೆ ಹೋಗಬೇಕಿತ್ತು. ಆದರೆ ಇಂದು ಕಳೆದೆರಡು ವರ್ಷದಿಂದ ನಮ್ಮ ಮಹಾವಿದ್ಯಾಲಯದಲ್ಲಿಯೇ ದೇಶಪಾಂಡೆ ಸ್ಕಿಲ್ಲಿಂಗ್ ಇವರ ಸಹಯೋಗದಲ್ಲಿ ಅನೇಕ ವಿದ್ಯಾರ್ಥಿಗಳು ತರಬೇತಿಗೊಂಡು ಒಳ್ಳೆಯ ಉದ್ಯೋಗವನ್ನು ಪಡೆದಿದ್ದಾರೆ. ಜೀವನದಲ್ಲಿ ಸಂಯಮ ಬಹಳ ಮುಖ್ಯ ಸಂಯಮದಿಂದ ಕಲಿತು ವ್ಯಕ್ತಿತ್ವವನ್ನು ರೂಪಿಸಿಕೊಂಡರೆ ಉದ್ಯೋಗದಲ್ಲಿ ಉತ್ತಮ ಅಭಿವೃದ್ಧಿಯ ಹೊಂದಲು ಸಾಧ್ಯ ಎಂದರು.
ವೇದಿಕೆ ಮೇಲೆ ಪ್ಲೇಸ್ ಮೆಂಟ್ ಸೆಲ್ ಆಫೀಸರ್ ಕೆ ಎನ್ ರೆಡ್ಡಿ, ದೇಶಪಾಂಡೆ ಫೌಂಡೇಶನ್ ನ ಕರಾವಳಿ ವಿಭಾಗ ಮುಖ್ಯಸ್ಥ ಶ್ರೀನಿವಾಸ್ ನಾಯಕ್, ತರಬೇತಿದಾರರಾದ ಯಶವಂತಿ ಶಿಂದೆ ಮತ್ತು ಶ್ರೀಧರ್ ಉಪಸ್ಥಿತರಿದ್ದರು. ಅನೇಕ ಉದ್ಯೋಗ ಅಕಾಂಕ್ಷಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ತರಬೇತಿಯನ್ನು ಪಡೆದರು.