ಶಿರಸಿ: ಶಿರಸಿ ವೃತ್ತದ ಹೊಸಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಯಲ್ಲಾಪುರ ರಸ್ತೆಯ ಪಂಚವಟಿ ಹೊಟೇಲ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಈರ್ವರನ್ನು ಶಿರಸಿ ಪೋಲಿಸರು ಬಂಧಿಸಿದ್ದಾರೆ.
ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ಮಾಡಿದ ಪೋಲಿಸರು, ಆರೋಪಿತರಾದ ಶ್ರೀನಗರದ ಆಕಾಶ್ ಶಂಕರ ಕಾನಗೋಡರ ಹಾಗೂ ಮಾರಿಕಾಂಬಾ ನಗರದ ಅಮಿತ್ ಅಶೋಕ ಜಾಧವ ಇವರುಗಳನ್ನು ಬಂಧಿಸಿ, ಅವರ ಬಳಿ ಇದ್ದ ಸುಮಾರು 10,500/- ರೂ ಮೌಲ್ಯದ ಗಾಂಜಾ ಮಾದಕ ವಸ್ತು ಹಾಗೂ ಸಾಗಾಟಕ್ಕೆ ಬಳಸಿದ ಯಮಹಾ ಎಮ್.ಟಿ 15 ಮೋಟಾರ ಸೈಕಲ್ ವಶಪಡಿಸಿಕೊಂಡಿದ್ದು ಪ್ರಕರಣ ದಾಖಲಿಸಲಾಗಿದೆ.
ಪೋಲಿಸ್ ಅಧಿಕ್ಷಕ ಎನ್.ವಿಷ್ಣುವರ್ಧನ್, ಸಿ.ಟಿ ಜಯಕುಮಾರ, ಹೆಚ್ಚುವರಿ ಪೊಲೀಸ ಅಧೀಕ್ಷಕ ಜಗದೀಶ್ ಎಮ್, ಡಿವೈಎಸ್‌ಪಿ ಗಣೇಶ ಕೆ.ಎಲ್, ಸಿಪಿಐ ರಾಮಚಂದ್ರ ನಾಯಕ ಮಾರ್ಗದರ್ಶನದಲ್ಲಿ ಶಿರಸಿ ಹೊಸಮಾರುಕಟ್ಟೆ ಪೊಲೀಸ ಠಾಣೆ ಪೊಲೀಸ್ ಉಪನಿರೀಕ್ಷಕರಾದ ರತ್ನಾ ಕುರಿ ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಯವರಾದ ಮಹಾಂತೇಶ ಬಾರಕೇರ, ರಾಮಯ್ಯ ಪೂಜಾರಿ, ಹನುಮಂತ ಮಾಕಾಪೂರ, ಪ್ರಸಾದ ಮಡಿವಾಳ, ಮಂಜುನಾಥ ವಾಲಿರವರುಗಳು ಭಾಗವಹಿಸಿ ಆರೋಪಿತರನ್ನು ವಶಕ್ಕೆ ಪಡೆಯಲು ಸಹಕರಿಸಿದ್ದಾರೆ.