ಶಿರಸಿ: ತಾಲೂಕಿನಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜ.10 ಬುಧವಾರರದಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 6 ಘಂಟೆವರೆಗೆ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗುವುದು.
ಶಿರಸಿ ನಗರದಾದ್ಯಂತ ಹಾಗೂ 110/11 ಕೆ.ವಿ ಉಪಕೇಂದ್ರದಿಂದ ಹೊರಡುವ ಗ್ರಾಮೀಣ ಮಾರ್ಗಗಳಾದ ಬನವಾಸಿ, ಸುಗಾವಿ, ದೇವನಳ್ಳಿ, ಚಿಪಗಿ, ಮಾರಿಗದ್ದೆ, ಕೆಂಗ್ರೆ, ವಾನಳ್ಳಿ, ಹುಲೇಕಲ್, ಸಾಲ್ಕಣಿ, ಸಂಪಖಂಡ, ತಾರಗೋಡ, 220/11 ಕೆ.ವಿ ಉಪಕೇಂದ್ರದಿಂದ ಹೊರಡುವ ಗ್ರಾಮೀಣ ಮಾರ್ಗಗಳಾದ ಇಸಳೂರು, ದಾಸನಕೊಪ್ಪ, ಭಾಶಿ, ಬಂಕನಾಳ, ತಿಗಣಿ, ಅಂಡಗಿ ಭಾಗಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಕಾರಣ ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಕೆ.ಪಿ.ಟಿ.ಸಿ.ಎಲ್ ಶಿರಸಿ ರವರು ತಿಳಿಸಿರುತ್ತಾರೆ.