ಶಿರಸಿ : ಇಲ್ಲಿಯ ಮರಾಠಿಕೊಪ್ಪದಲ್ಲಿ ಇರುವ ಶ್ರೀ ಸದ್ಗರು ಶ್ರೀ ನಿತ್ಯಾನಂದ ಮಂದಿರದಲ್ಲಿ “ಪ್ರಜಾಪ್ರತಿನಿಧಿ” ಬಳಗದ 2024 ನೇ ಸಾಲಿನ ದಿನದರ್ಶಿಕೆ (ಕ್ಯಾಲೆಂಡರ್) ಮಂದಿರದ ಅಧ್ಯಕ್ಷ ವಿಷ್ಣು ಹರಿಕಾಂತ ವಿಶೇಷ ಪೂಜೆಯನ್ನು ಸಲ್ಲಿಸುವ ಮೂಲಕ ಬಿಡುಗಡೆಗೊಳಿಸಿದರು. ಈ ಕ್ಯಾಲೆಂಡರನ್ನು ಜಾಹಿರಾತುದಾರರ ಹಾಗೂ ದಾನಿಗಳು ಸಹಾಯದಿಂದ ಪ್ರಕಟಿಸಿ ಉಚಿತವಾಗಿ ವಿತರಿಸುತ್ತಿದ್ದು, ಈ ಮಹಾನ್ ಮುದ್ರಣ ಕಾರ್ಯಕ್ಕೆ ಸಹಾಯ ಮಾಡಿದ ಎಲ್ಲರಿಗೂ ನಿತ್ಯಾನಂದರೂ ಹಾಗೂ ಮಹಾಬಲಾನಂದರೂ ಹಾಗೂ ಶಿರಸಿ ಮಾರಿಕಾಂಬಾ ದೇವಿಯು 2024 ವರ್ಷದಲ್ಲಿ ಶುಭವನ್ನುಂಟು ಮಾಡಲಿ ಎಂದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ರಾಮಚಂದ್ರ ಗಾಂವಕರ ಪಾಂಡುರಂಗ ಪಾಟೀಲ್, ರಾಜೇಶ ಆರೇರ ಎಸಳೆ, ಲಿಂಗಪ್ಪ ಕೊಂಡಲಿ ಸೇರಿದಂತೆ ಹಲವಾರು ಮಠದ ಭಕ್ತರು ಹಾಗೂ ಅರ್ಚಕರು ಉಪಸ್ಥಿತರಿದ್ದರು.
ಪುಣ್ಯಕ್ಷೇತ್ರವಾದ ಮಠ :
1964 ರಲ್ಲಿ ಈ ಮಠದ ಸಂಸ್ಥಾಪಕರಾದ ಶ್ರೀ ಸದ್ಗರು ಮಹಾಬಲಾನಂದ ಸ್ವಾಮಿಗಳು ಶಿರಸಿಯ ಶ್ರೇಷ್ಠ ಅಮರಶಿಲ್ಪಿಗಳಾದ ಮಂಜಪ್ಪ ಗುಡಿಗಾರ ಅವರಿಂದ ಕೆತ್ತಲ್ಪಟ್ಟ ಶ್ರೀ ರಾಮ ಸೀತಾ ಲಕ್ಷ್ಮಣ ಮತ್ತು ಆಂಜನೇಯರನ್ನು ಸಾಕ್ಷಾತರಿಸುವ ಕಲಾ ಮೂರ್ತಿಗಳ ಒಳಗೊಂಡ ಶ್ರೀರಾಮ ಮಂದಿರ ಹಾಗೂ ಶನೇಶ್ವರ ಮಂದಿರ ಮತ್ತು ಉಮಾ ಮಹೇಶ್ವರಿ ದೇವಸ್ಥಾನ ಹಾಗೂ ಶ್ರೀ ಸುಬ್ರಹ್ಮಣೇಶ್ವರನ್ನು ಸ್ಥಾಪಿಸಿದ್ದಾರೆ. ಅಲ್ಲದೆ ಇಲ್ಲಿ ಶ್ರೀ ಮಹಾಬಲಾನಂದ ಶ್ರೀಗಳ ಸಮಾಧಿ ಸ್ಥಳ ಇಲ್ಲಿದೆ. ಈ ಮಠವು ಪುಣ್ಯ ಕ್ಷೇತ್ರವಾಗಿದೆ. ಈ ಮಠಕ್ಕೆ ಸಾರ್ವಜನಿಕರು ಬಂದು ದರ್ಶನವನ್ನು ಮಾಡಿ ಪುಣ್ಯ ಪುನೀತರಾಗುತ್ತಿದ್ದಾರೆ. ಹಾಗೂ ಇಲ್ಲಿ ಅನೇಕ ಯಾಗ-ಯಜ್ಞ ಮತ್ತು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಮಠದಲ್ಲಿ ನಿರಂತರವಾಗಿ ಭಕ್ತರ ಸಹಾಯ ಸಹಕಾರ ಬೆಂಬಲದಿಂದ ನಡೆಯುತ್ತಿದೆ ಎಂದು ಇವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.