ಹೊನ್ನಾವರ: ಇತ್ತೀಚೆಗೆ ಸುರಿದ ಅಕಾಲಿಕ ಮಳೆಗೆ ತಾ:ಲೂಕಿನ ಚಿಕ್ಕನಕೋಡ ಗ್ರಾಮದ ಗುಂಡಿಬೈಲ್ ಭಾಗದಲ್ಲಿ ಬೆಳೆದ ಭತ್ತದ ಫಸಲು ಸಂಪೂರ್ಣ ನೀರು ಪಾಲಾಗಿದ್ದು ರೈತ ಕಂಗಾಲಾಗಿದ್ದಾನೆ.
ಈ ಬಾರಿಯ ಹಿಂಗಾರು ಬೆಳೆ ತುಂಬ ಚೆನ್ನಾಗಿ ಬಂದಿದೆ ಎಂದು ಹೇಳುತ್ತಿದ್ದ ರೈತರೆಲ್ಲ ಖುಷಿಯಿಂದಲೇ ಕಟಾವಿಗೆ ತೊಡಗಿಕೊಳ್ಳುತ್ತಿರುವಾಗಲೇ ಅಕಾಲಿಕ ಮಳೆ ಸುರಿದು ಎಲ್ಲ ಭತ್ತದ ಫಸಲು ನೀರಿನಲ್ಲಿ ಮುಳುಗಡೆಯಾಗಿದೆ. ಇದರಿಂದಾಗಿ ಮಾಡಿದ ಶ್ರಮವೆಲ್ಲ ನೀರಲ್ಲಿ ಹೋಮ ಮಾಡಿದಂತಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಸೋಮವಾರ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪುನೀತಾ ಕಿರಣ್ ಕಂದಾಯ ಇಲಾಖೆ ಅಧಿಕಾರಿಗಳ ಜೊತೆಗೂಡಿ ಸ್ಥಳಿಕ್ಕೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿ ಮಾಹಿತಿ ಪಡೆದಿದ್ದಾರೆ.