Slide
Slide
Slide
previous arrow
next arrow

ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ: ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಆರ್.ವಿ.ಡಿ

300x250 AD

ಜೋಯಿಡಾ: ಜೋಯಿಡಾದಲ್ಲಿ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಶಾಸಕ ಆರ್.ವಿ ದೇಶಪಾಂಡೆ ತ್ರೈ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿ, ತಾಲೂಕಿನಲ್ಲಿ ಬೇಜವಾಬ್ದಾರಿಯಿಂದ ಕೆಲಸ ಮಾಡುವ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ನಮ್ಮಲಿರುವುದು ಜನರ ಹಣ, ಕೆಲಸ ಮಾಡುವಾಗ ನಿಯತ್ತಿನಿಂದ ಮಾಡಿರಿ, ನಿಮ್ಮ ಮನೆ ಕೆಲಸವಲ್ಲ ಸಾರ್ವಜನಿಕರ ಹಣ ಎಂದು ಬೇಕಾಬಿಟ್ಟಿ ವರ್ತನೆ ಮಾಡಿದರೆ ನಾನು ಸಹಿಸೋದಿಲ್ಲ ಎಂದರು.

ಅಣಶಿಯಲ್ಲಿ ಮಾದೇವ ಗಾವುಡ ಅವರ 300 ಅಡಿಕೆ ಮರ ಕಡಿದು ನಾಶ ಮಾಡಿದ ಬಗ್ಗೆ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಮಾರಾಕ್ಷರ ಅವರ ಸ್ವಂತ ಆಸಕ್ತಿಯಿಂದ ಈ ಅಡಿಕೆ ಗಿಡ ನಾಶಪಡಿಸಿದ ಬಗ್ಗೆ ತೀವ್ರ ಚರ್ಚೆಯಾಗಿ ಶಾಸಕರು ಡಿಪ್ಒ ರವರಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿದರು. ಕೂಡಲೇ ಅಮರಾಕ್ಷರರವರಿಗೆ ಶೋಕಾಸ್ ನೋಟೀಸ್ ನೀಡಲು ಹೇಳಿದರು. ಅರಣ್ಯದಲ್ಲಿ ಬದುಕುವ ಜನರ ಮನೆ ರಿಪೇರಿಗೆ ತೊಂದರೆ ನೀಡಿದರೆ ನಾನು ಸಹಿಸೋದಿಲ್ಲ ಜನರಿಗೆ ಬದುಕುವ ಹಕ್ಕಿದೆ ನೀವು ಮನಸ್ಸಿಗೆ ಬಂದಂತೆ ವರ್ತಿಸಿದರೆ ನಾನು ನನ್ನ ಕ್ರಮ ಮಾಡಬೇಕಾಗುತ್ತದೆ. ಸರಕಾರದ ಕಾರ್ಯಕ್ರಮವನ್ನು ಜನತೆಗಾಗಿ ಮಾಡಿದಾಗ ಅದನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದು ಮಾಡಬೇಕು. ನಮಗೂ ಜನರ ಅಗತ್ಯತೆ ಬಗ್ಗೆ ತಿಳಿಯಬೇಕಾಗುತ್ತದೆ ಎಂದರು.

ಕಳಪೆ ಕಾಮಗಾರಿ ಕುರಿತು ಮಾತನಾಡಿ ಕಳಪೆ ಕಾಮಗಾರಿ ನಡೆದ ಬಗ್ಗೆ ಸಾರ್ವಜನಿಕರು ದೂರುತ್ತಿದ್ದು ನಿಮಗೆ ಆಸಕ್ತಿ ಇದ್ದರೆ ಇಲ್ಲಿ ಇರಿ ಇಲ್ಲವೆಂದಾದರೆ ನೀವು ಜಾಗ ಖಾಲಿ ಮಾಡಿ, ಆಸಕ್ತಿ ಇಲ್ಲದೆ ಕೆಲಸ ಮಾಡಬೇಡಿ , ಅಧಿಕಾರಿಗಳು ಮಾಡುವ ತಪ್ಪುಗಳು ಜನರೇ ಹೇಳುವಂತ ಸ್ಥಿತಿ ಬಂದಿದೆ ಎಂದರು.

300x250 AD

800 ಜನರು ಇದುವರೆಗೂ ವಾರಸಾ ಮಾಡಿಸಿಕೊಳ್ಳದೆ ಇದ್ದ ಬಗ್ಗೆ ಸಭೆಯ ಗಮನಕ್ಕೆ ತಹಶೀಲ್ದಾರರು ತಂದರು. ಕೂಡಲೇ ಗುಂದಕ್ಕೆ ಬಸ್ ಬಿಡುವಂತೆ ಇಲಾಖೆಗೆ ಸೂಚಿಸಿ ಲೋಕೋಪಯೋಗಿ ಇಲಾಖೆಯ ಅಭಿಯಂತರ ಅವರಿಗೆ ರಸ್ತೆ ಸರಿಪಡಿಸಿ ಬ್ರಿಡ್ಜ್ ಪಕ್ಕದಿಂದ ಬಸ್ ಹೋಗುವಂತೆ ಮಾಡಿ ಕೊಡಲು ತಿಳಿಸಿದರು. ಕೆ. ಎಸ್. ಆರ್. ಟಿ ಸಿ ಡಿಪೋ ವ್ಯವಸ್ಥಾಪಕರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಕೂಡಲೇ ವ್ಯವಸ್ಥೆ ಸರಿಪಡಿಸಲು ಹೇಳಿದರು. ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದರು. ಇದೆ ಸಂದರ್ಭದಲ್ಲಿ ಕೃಷಿ ಇಲಾಖೆ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಗಳಿಂದ ವಿತರಿಸುವ ಸಾಮಗ್ರಿ ವಿತರಿಸಿದರು. ಜೊಯಿಡಾದ ಶಾಲೆ ಮತ್ತು ತಹಶೀಲ್ದಾರ್ ಕಚೇರಿಯ ತಂತ್ರಾಂಶ ಉದ್ಘಾಟಿಸಿದರು. ಮಾನವನಾಗಿ ಹುಟ್ಟಿದ ಮೇಲೆ ಮಾನವನಾಗಿ ಬಾಳಬೇಕು ರಾಕ್ಷಸರಾಗಿ ಅಲ್ಲ ನಾನು ಸರ್ಜರಿ ಮಾಡಿದರೆ ಎಲ್ಲರಿಗೂ ಆಪರೇಷನ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಹಶೀಲ್ದಾರ್ ಮತ್ತು ತಾಪಂಕಾನಿ ಅಧಿಕಾರಿಗಳಿಗೆ ಎಲ್ಲ ಕಾಮಗಾರಿಗಳ ಬಗ್ಗೆ ಗಮನ ಹರಿಸಿ ಕ್ರಮ ಕೈ ಕೊಳ್ಳಲು ಸೂಚಿಸಿದರು. ಈ ಸಂದರ್ಭದಲ್ಲಿ ತಾಲೂಕಾ ಉಸ್ತುವಾರಿ ಕರ್ನಾಟಕ ಕೃಷಿ ವಿವಿ ಕುಲಪತಿ ಜಯಲಕ್ಷ್ಮಿ ರಾಯಕೋಡ, ತಹಶೀಲ್ದಾರ ಮಂಜುನಾಥ ಮುನ್ನೊಳೀಕಾನಿ, ಅಧಿಕಾರಿ ಆನಂದ ಬಡಕುಂದ್ರಿ ಡಿ. ವಾಯ್. ಎಸ್. ಪಿ ಶಿವಾನಂದ ಕಟಗಿ ಗ್ರಾಪಂ ಅಧ್ಯಕ್ಷೆ ಚಂದ್ರಿಮ ಮಿರಾಷಿ ಇದ್ದರು.

Share This
300x250 AD
300x250 AD
300x250 AD
Back to top