ಕುಮಟಾ: ತಾಲೂಕಿನ ಸಂತೆಗುಳಿ, ಸೊಪ್ಪಿನ ಹೊಸಳ್ಳಿ, ಮೂರೂರು, ಕಲ್ಲಬ್ಬೆ, ಗ್ರಾಮ ಪಂಚಾಯತ್ ವತಿಯಿಂದ ಸಂತೆಗುಳಿ ಸರಕಾರಿ ಪ್ರೌಢಶಾಲೆಯ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆಯನ್ನು ಪ್ರೊಪೆಸರ್ ಎಂ.ಜಿ.ಭಟ್ ನೆರವೇರಿಸಿ, ಮಾತನಾಡಿದ ಅವರು ಮಕ್ಕಳಿಗೆ ಉತ್ತಮ ಸಂಸ್ಕಾರ, ದೇಶ ಪ್ರೇಮದ ಬಗ್ಗೆ ಕಲ್ಪನೆ ನೀಡುವದು ಅನಿವಾರ್ಯ ಎಂದರು.
ಸೊಪ್ಪಿನ ಹೊಸಳ್ಳಿ ಗ್ರಾಪಂ ಅಧ್ಯಕ್ಷರು ಶೈಲಾ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಮಾಜಿ ಗ್ರಾ ಪಂ ಅಧ್ಯಕ್ಷರಾದ ವಿನಾಯಕ ಭಟ್, ಜನಪರಹೊರಟ ವೇದಿಕೆ ಉಪಾಧ್ಯಕ್ಷರಾದ ಉದಯ ಭಟ್, ಗ್ರಾ ಪಂ ಸದಸ್ಯರಾದ ಜಮಾಲ್ ಸಾಬ್, ಶ್ರೀಮತಿ ಮಾದೇವಿ ಮುಕ್ರಿ, ಶ್ರೀಮತಿ ಭಾರತೀ ಮುಕ್ರಿ, ಮೇಲ್ವಿಚಾರಕರಾದ ಶ್ರೀಮತಿ ಇಂದಿರಾ ಹರಿಕಾಂತ, ಶ್ರೀಮತಿ ಭಾರತೀ ಪಟಗಾರ, ಇದ್ದರು. ಶ್ರೀಮತಿ ಇಂದಿರಾ ಹರಿಕಾಂತ ಪ್ರಸ್ತಾವಿಕವಾಗಿ ಮಾತನಾಡಿದರು. ಮೂರೂರು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಗುಲಾಬಿ ಕೋಡಿಯ ನಿರೂಪಿಸಿದರೆ, ಶ್ರೀಮತಿ ಪದ್ಮಾವತಿ ನಾಯ್ಕ್ ಸ್ವಾಗತಿಸಿದರು. ಸ್ವಾಗತ ಗೀತೆಯನ್ನು ಬಂಗಣೆ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಯಮುನಾ ಕೆ, ಬಂಗಣೆ ಅಂಗನವಾಡಿ ಮಕ್ಕಳಾದ ಕುಮಾರಿ, ವಿನುತಾ, ಚಿರನ್ವಿ, ಭೂಮಿಕಾ, ಕಾಂಚನ, ಧನ್ಯಶ್ರೀ, ನೆರವೇರಿಸಿದರು. ಸಂತೆಗುಳಿ ಗ್ರಾ ಪಂ ಅಧ್ಯಕ್ಷರಾದ ಮಹೇಶ್ ನಾಯ್ಕ್ ಎಲ್ಲ ಮಕ್ಕಳಿಗೆ ಬಹುಮಾನವನ್ನು ಪ್ರಾಯೋಜಿಸಿದರು, ಊಟ ಹಾಗೂ ಉಪಹಾರ ವ್ಯವಸ್ಥೆಯನ್ನು ರವಿ ನಾಯ್ಕ, ಅಸ್ಲಾಮ್ ಸಾಬ್ ಯಜತ್ ಸಾಬ್, ಗುರುಪ್ರಸಾದ್ ನಾಯ್ಕ್, ಪರಮೇಶ್ವರ ನಾಯ್ಕ್, ವಿಶ್ವರಕ್ಷಣಾ ಉತ್ತರ ಕನ್ನಡ ಗ್ರಾಮೀಣಾಭಿವೃದ್ದಿ ಟ್ರಸ್ಟ್ ಅಧ್ಯಕ್ಷರಾದ ವಿಶ್ವನಾಥ ಜಿ ನಾಯ್ಕ ಮಾಡಿದರು. ಈ ಸಂದರ್ಭದಲ್ಲಿ ಬಾಲಮೇಳ ಕಾರ್ಯಕ್ರಮದಲ್ಲಿ ಸದಾಪ, ಆಇರಾ, ಅಜಾದ್, ಕುಶ, ಚಿತ್ರ. ಜನನಿ, ಗೋಪಾಲ ಮಕ್ಕಳ ಹುಟ್ಟುಹಬ್ಬವನ್ನು ಗಣ್ಯರ ಸಮ್ಮುಖದಲ್ಲಿ ಆಚರಿಸದರು ಸೀಮಾ ಭಟ್ ವಂದನಾರ್ಪಣೆ ಮಾಡಿದರು,ಈ ಸಂದರ್ಭದಲ್ಲಿ ಮೂರೂರ್ ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ವಿಮಲಾ ನಾಯ್ಕ್,ಕು. ಸುಗುಣ ಮಡಿವಾಳ, ಶ್ರೀಮತಿ ಸುಧಾ ಹೆಗಡೆ, ಶ್ರೀಮತಿ ಕಲ್ಪನಾ ಶೆಟ್ಟಿ,ಮತ್ತಿತರು, ಕಲ್ಲಬ್ಬೆ ಪಂಚಾಯತ್, ಸರೋಜ್ ನಾಯ್ಕ್ ಶ್ರೀಮತಿ ಶೈಲ ಶೆಟ್ಟಿ ಮತ್ತಿತರರು, ಸೊಪ್ಪಿನಹೊಸಳ್ಳಿ ಶ್ರೀಮತಿ ರತ್ನನಾಯ್ಕ್,ಶಾಂತಿ ಗೌಡ,ಸಾವಿತ್ರಿ,ಗೌಡ, ರೇವತಿ ,ನಾಯ್ಕ್,ಕಲಾವತಿ, ಮರಾಠಿ, ತಾರಾ ನಾಯ್ಕ್, ಸವಿತಾ ನಾಯ್ಕ್. ಪ್ರೇಮ ನಾಯ್ಕ್. ಲೀಲಾವತಿ ನಾಯ್ಕ್ ಮತ್ತಿತರರು, ಸಂತೆಗುಳಿ ಕುಸುಮಾ ನಾಯ್ಕ್, ದಾಕ್ಷಯಿಣಿ ನಾಯ್ಕ್, ಸುಮನ ನಾಯ್ಕ್ ಸುಮನಾ ಭಂಡಾರಿ,ಮಾದೇವಿ ಗೌಡ, ಹೇಮಾ ಗೌಡ, ಉಷಾ ನಾಯ್ಕ್, ಸಾವಿತ್ರಿ ಗೌಡ, ಗೀತಾ ಗೌಡ ಮತ್ತಿತರರು ಇದ್ದರು. ನಾಲ್ಕು ಗ್ರಾಮ ಪಂಚಾಯತ ಭಾಗದ ಪಾಲಕರು ಪೋಷಕರಗಳು ಮುದ್ದು ಮಕ್ಕಳು ಇದ್ದು ಯಶಸ್ವಿಗೊಳಿಸಿದರು. ಮಕ್ಕಳಿಂದ, ಛದ್ಮವೇಷ, ಅಭಿನಯ ಗೀತೆ, ಗಾಯನ, ವಿವಿಧ ಆಟಗಳು ನಡೆದು, ಕಾರ್ಯಕ್ರಮ ಯಶಸ್ವಿಗೊಳಿಸಿದರು.