Slide
Slide
Slide
previous arrow
next arrow

ಜ.17ಕ್ಕೆ ಉಮ್ಮಚಗಿಯಲ್ಲಿ ‘ಉಪಾಸನಮ್’ ಸಂಗೀತ ಕಾರ್ಯಕ್ರಮ

300x250 AD

ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಶ್ರೀ ಮಹಾಗಣಪತಿ ಸಂಗೀತ ಪ್ರತಿಷ್ಠಾನ, ಕೋಟೆಮನೆ, ‘ಮನಸ್ವಿನೀ ವಿದ್ಯಾನಿಲಯ’ ಶಾಲಾ ಕಟ್ಟಡ ನಿರ್ಮಾಣ ಸಹಾಯಾರ್ಥ “ಉಪಾಸನಮ್” ಕಾರ್ಯಕ್ರಮವನ್ನು ಜ.17, ಗುರುವಾರ ಸಂಜೆ 5ರಿಂದ ಮನಸ್ವಿನೀ ವಿದ್ಯಾನಿಲಯ, ಕಾನಬೇಣ, ಹಿರೇಸರದಲ್ಲಿ ಆಯೋಜಿಸಲಾಗಿದೆ.

ಮುಂಬೈನ ಖ್ಯಾತ ಹಿಂದೂಸ್ಥಾನಿ ಗಾಯಕಿ ಶ್ರೀಮತಿ ಗೌರಿ ಪಠಾರೆ ಅವರಿಂದ ಗಾಯನ ಕಾರ್ಯಕ್ರಮ ಹಾಗೂ ಅಂತರಾಷ್ಟ್ರೀಯ ಕೊಳಲು ವಾದಕ ಪಂ. ಪ್ರವೀಣ್ ಗೋಡ್ಖಿಂಡಿ ಅವರಿಂದ ಕೊಳಲು ವಾದನ ನಡೆಯಲಿದ್ದು ನಂತರದಲ್ಲಿ ಸರಿಗಮಪ ಖ್ಯಾತಿಯ ಸಂಜಿತ್ ಹೆಗಡೆ ಹಾಗೂ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಸಂವಾದಿನಿಯಲ್ಲಿ ಪಂ. ಸುಧೀರ್ ನಾಯ್ಕ, ಮುಂಬೈ ಹಾಗೂ ತಬಲಾದಲ್ಲಿ ಪಂ. ರಾಜೇಂದ್ರ ನಾಕೋಡ್, ಬೆಂಗಳೂರು, ಕಿರಣ್ ಗೋಡಖಿಂಡಿ ಭಾಗವಹಿಸಲಿದ್ದಾರೆ.

300x250 AD

ಕಾರ್ಯಕ್ರಮದ ಪ್ರವೇಶ ದರ: ₹1,000 ಹಾಗೂ ₹ 500 ನಿಗದಿಯಾಗಿದ್ದು, ಸ್ಕ್ಯಾನ್ ಮಾಡಿ ಆನ್ ಲೈನ್ ನಲ್ಲಿ ಪಾವತಿಸಿ, ರಶೀದಿಯನ್ನುtel:+918971861533 ಮೂಲಕ ಟಿಕೇಟ್ ಕಾಯ್ದಿರಿಸಬಹುದು. ಅಥವಾ ನೇರವಾಗಿ ಟಿಕೆಟ್ ಪಡೆಯಲು ಮನಸ್ವಿನೀ ವಿದ್ಯಾನಿಲಯ ಸಂಪರ್ಕಿಸಲು ಕೋರಲಾಗಿದ್ದು, ಟಿಕೇಟ್ ಪಡೆಯಲು ಕೊನೆಯ ದಿನಾಂಕ: 10-01-2024. ಹೆಚ್ಚಿನ‌ ಮಾಹಿತಿಗಾಗಿ :tel:+919448423234 ,tel:+918660361864 ಸಂಪರ್ಕಿಸಲು ಕೋರಲಾಗಿದೆ.

Share This
300x250 AD
300x250 AD
300x250 AD
Back to top