ಹೊನ್ನಾವರ: ತಾಲೂಕಿನ ಚಂದಾವರ ಗ್ರಾಮದ ಮಂಗಲ ಹಳ್ಳಕ್ಕೆ ಬಾಂದಾರ ನಿರ್ಮಾಣ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ನಬಾರ್ಡ್ ಆಣೆಕಟ್ಟು ಪಿಕಪ್ ಬಾಂದಾರ ಲೆಕ್ಕಶೀರ್ಷಿಕೆ ಅಡಿಯಲ್ಲಿ 76.14ಲಕ್ಷ ಅಂದಾಜು ಮೊತ್ತದಲ್ಲಿ ನೆರವೇರಲಿರುವ ಕಾಮಗಾರಿ ಇದಾಗಿದೆ.
ಚಂದಾವರ ಗ್ರಾ. ಪಂ. ಅಧ್ಯಕ್ಷೆ ಪ್ರೇಮಾ ಮೋಹನ ನಾಯ್ಕ, ಸದಸ್ಯರಾದ ಅಶ್ವಿನಿ ನಾಯ್ಕ, ಮಂಜುನಾಥ್ ಮಡಿವಾಳ, ಹುದಾ ಹುಸೇನ್ ಶೇಖ್, ಚಂದ್ರು ನಾಯ್ಕ, ವಿನಯ್ ನಾಯ್ಕ, ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಅಭಿಯಂತರ ಅನಿಲ್, ಪಕ್ಷದ ಸ್ಥಳೀಯ ಪ್ರಮುಖರಾದ ದಾಮು ಗೌಡ, ಕೃಷ್ಣ ಗೌಡ ಕಡ್ನೀರು, ಹುಸೇನ್ ಶೇಖ್, ಮೋಹನ ನಾಯ್ಕ ಹಾಗೂ ಇತರರು ಇದ್ದರು.