Slide
Slide
Slide
previous arrow
next arrow

ಕರಾಟೆ ಚಾಂಪಿಯನ್‌ಶಿಪ್: ದಾಂಡೇಲಿ ಕರಾಟೆ ಕ್ಲಬ್, ಕ್ಲಾಸಸ್ ವಿದ್ಯಾರ್ಥಿಗಳ ಸಾಧನೆ

300x250 AD

ದಾಂಡೇಲಿ: ಹುಬ್ಬಳ್ಳಿಯಲ್ಲಿ ನಡೆದ ಸೌತ್ ಇಂಡಿಯಾ ಮುಕ್ತ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ನಗರದ ದಾಂಡೇಲಿ ಕರಾಟೆ ಕ್ಲಬ್ ಹಾಗೂ ಕ್ಲಾಸಸ್‌ನ 11 ವಿದ್ಯಾರ್ಥಿಗಳು ಭಾಗವಹಿಸಿ ಕುಮಿಟೆ ( ಪೈಟ್) ಹಾಗೂ ಕಟಾ ವಿಭಾಗದಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಪಡೆದು ನಗರಕ್ಕೆ ಕೀರ್ತಿಯನ್ನು ತಂದಿದ್ದಾರೆ.

ಚಾಂಪಿಯನ್ ಶಿಪ್‌ನಲ್ಲಿ ಕ್ರಮವಾಗಿ ಸುಪ್ರಿಯಾ ತಲಪಾಟಿ, ನಿಖಿಲ್ ಪಾಟೀಲ, ಇಕ್ರಾ ಜಂಬಗಿ, ಅಭಿನವ ಗುಲಗಂಜಿ, ಜೈನಬ ಮುಕಾಶಿ, ಬದ್ರಿಯಾ ಮುಕಾಶಿ,ತರುಣ್ ಜಾದವ್, ರನವಿತಾ ಹಲಗೇಕರ, ಪ್ರಣವ ಸೌದತ್ತಿ, ಮಲಿಕ್ ಕಿತ್ತೂರು, ಜೈಯದ್ ಜಂಬಗಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದರು.

300x250 AD

ಕರಾಟೆ ಶಿಕ್ಷಕರಾದ ಯಾಕುಬ್ ಶೇಖ, ರಿಯಾಜ್ ಬಿಡಿಕರ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದ್ದಾರೆ.

Share This
300x250 AD
300x250 AD
300x250 AD
Back to top