ಕಾರವಾರ: ಅಳಿವಿನ ಅಂಚಿನಲ್ಲಿ ಇರುವ ಹಿಮಾಲಯನ್ ಗ್ರಿಫಿನ್ ಒಲ್ಟರ್ ರಣಹದ್ದು ನಗರದ ಬೈತಖೋಲ್ ಪ್ರದೇಶದಲ್ಲಿ ಕಂಡಿದೆ.
ಗಿಡುಗ, ಕಾಗೆಗಳೊಂದಿಗೆ ಹಾರಾಡುತ್ತಿದ್ದಾಗ ಸ್ಥಳೀಯರು ದೊಡ್ಡದಾಗಿ ಈ ಹಕ್ಕಿ ಗೋಚರಿಸಿದ ಕಾರಣ ಫೊಟೊ ತೆಗೆದಿದ್ದಾರೆ. ಇದು ಕಾಣಿಸಿಕೊಳ್ಳುವುದು ತೀರಾ ವಿರಳವಾಗಿದ್ದು, ಜತೆಗೆ ಅಳಿವಿನಂಚಿನಲ್ಲೂ ಇದೆ. ಹಿಮಾಲಯನ್ ಗ್ರಿಫಿನ್ ಒಲ್ಟರ್ ಜೀವಿತವಧಿ 30-40 ವರ್ಷವಾಗಿದೆ. ಕೊಳೆತ ಮಾಂಸವನ್ನು ತಿಂದು ಬದುಕುತ್ತವೆ.