Slide
Slide
Slide
previous arrow
next arrow

ಮೀಸಲಾತಿ ಸೌಲಭ್ಯ ಸಮಾಜಕ್ಕೆ ಸಿಕ್ಕ ಸಾಮಾಜಿಕ ನ್ಯಾಯ: ರವೀಂದ್ರ ನಾಯ್ಕ

300x250 AD

ಶಿರಸಿ: ಅನಕ್ಷರಸ್ಥ, ಆರ್ಥಿಕವಾಗಿ ದುರ್ಬಲ, ಸಾಮಾಜಿಕ ಅಸಮತೋಲನಕ್ಕೆ ಒಳಗೊಂಡು, ಮೀಸಲಾತಿ ವಂಚಿತ ಜಾತಿಯ ಸದಸ್ಯರಲ್ಲಿ ಸಾಮಾಜಿಕ ಪ್ರಜ್ಞೆ ಮತ್ತು ಜಾಗೃತೆ ಮೂಡಿಸುವ ಮೂಲಕ ಮೀಸಲಾತಿ ಹಕ್ಕಿಗೆ ಕಳೆದ ನಾಲ್ಕು ದಶಕಗಳಲ್ಲಿ ಮೀಸಲಾತಿ ವಂಚಿತಗೊಂಡಿರುವ ಸಾಮಾಜಿಕ ನ್ಯಾಯ ಕೊಡಿಸಲಾಗಿದೆ ಎಂದು ಸಾಮಾಜಿಕ ಹೋರಾಟಗಾರ, ಹಿರಿಯ ವಕೀಲ ರವೀಂದ್ರ ನಾಯ್ಕ ಅವರು ಹೇಳಿದರು.

ಅವರು ನಾಲ್ಕು ದಶಕಗಳ ಸಾಮಾಜಿಕ ಹೋರಾಟದಲ್ಲಿನ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಸೌಲಭ್ಯ ವಂಚಿತ ಸಮಾಜವನ್ನು ಗುರುತಿಸಿ ಮೀಸಲಾತಿ ನೀಡಿದ ಹೋರಾಟದ ಹಿನ್ನೆಲೆಯನ್ನು ದಾಖಲೆಯ ಮೂಲಕ ಪ್ರಸ್ತುತ ಪಡಿಸುತ್ತಾ ಮೇಲಿನಂತೆ ಹೇಳಿದರು.

ಚೆನ್ನಪ್ಪ ರೆಡ್ಡಿ ಮೀಸಲಾತಿ ಆಯೋಗದಲ್ಲಿ, ಗುನಗಿ ಪಡ್ತಿ, ಉಪನಾಡವರ, ಕುಳವಡಿ ಮರಾಠಿ ಮುಂತಾದ ಜಾತಿಗಳು ಮೀಸಲಾತಿ ಪಟ್ಟಿಯಿಂದ ಕೈಬಿಟ್ಟಿರುವುದನ್ನು ಅಂದಿನ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಗಮನಕ್ಕೆ ತಂದು ನ್ಯಾಯ ಒದಗಿಸಿ ಕೊಡಲಾಗಿದ್ದು ೯೦ರ ದಶಕದಲ್ಲಿ ರಾಷ್ಟ್ರೀಯ ಹಿಂದುಳಿದ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಪಿ.ಕೆ ಶ್ಯಾಮಸುಂದರ ನೇತೃತ್ವದ ಆಯೋಗಕ್ಕೆ ಕೇಂದ್ರ ಸರಕಾರದ ಮೀಸಲಾತಿಯಿಂದ ವಂಚಿತರಾಗಿರುವ ಶೇರುಗಾರ್, ಸಿದ್ಧಿ, ಗುನಗಿ ಮತ್ತು ಕುಳವಾಡಿ ಮರಾಠಿ ಸಮಾಜವನ್ನು ತಾಂತ್ರಿಕ ದೋಷದಿಂದ ಮೀಸಲಾತಿ ವಂಚಿತವಾಗಿರುವ ಸಮಾಜದ ಪರವಾಗಿ ಕಾರ್ಯ ನಿರ್ವಹಿಸಲಾಗಿದೆ ಎಂದು ಅವರು ತಿಳಿಸಿದರು.

ಶಾಶ್ವತ ರಾಜ್ಯ ಹಿಂದುಳಿದ ಆಯೋಗದ ಪ್ರಥಮ ಅಧ್ಯಕ್ಷ ಪ್ರೋ. ರವಿವರ್ಮ ಕುಮಾರ್ ಆಯೋಗದ ಮುಂದೆ ಕುಂಬ್ರಿ ಮರಾಠಿ, ಪಾಗಿ (ಮಿನುಗಾರರ ಉಪಜಾತಿ) ಹಾಗೂ ತಾಂತ್ರಿಕ ದೋಷದ ಸಮಸ್ಯೆಯಿಂದ ಮೀಸಲಾತಿ ವಂಚಿತರಾಗಿರುವ ಕುಳವಾಡಿ ಮತ್ತು ಗುನಗಿ ಸಮಾಜಕ್ಕೆ ಮೀಸಲಾತಿ ಕುರಿತು ವಾದಮಂಡಿಸಿ ಮೀಸಲಾತಿ ಪಟ್ಟಿಗೆ ಸೇರಿಸಲ್ಪಟ್ಟಿರುವುದು ದಾಖಲಾರ್ಹ ಕ್ರಮ ಎಂದು ಅವರು ಉಲ್ಲೇಖಿಸಿದರು.

300x250 AD

ಹಿಂದಿನ ಪ್ರಧಾನ ಮಂತ್ರಿ ವಿ.ಪಿ ಸಿಂಗ್ ಜೊತೆ ಹಿಂದುಳಿದ ಸಮಾಜಗಳ ಮೀಸಲಾತಿ ಕುರಿತು ಮಂಡಲ ವರದಿ ಜ್ಯಾರಿಯಲ್ಲಿ ಪಾಲ್ಗೊಂಡಿರುವುದು ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಸಿಸುತ್ತಿರುವ ಹಾಲಕ್ಕಿ, ಗೌಳಿ, ಕುಣಬಿ, ಸಿದ್ಧಿ, ಕುಂಬ್ರಿ ಮರಾಠಿ, ಹಿರಿಯ ಕುಳವಾಡಿ ಮರಾಠಿ ಸಮಾಜವನ್ನ ಪರಿಶಿಷ್ಟ ವರ್ಗಕ್ಕೆೆ್ಕ ಸೇರಿಸಲು ಆಗ್ರಹಿಸಿ 1993 ರಲ್ಲಿ ಕಾರವಾರದಲ್ಲಿ ಬೃಹತ್ ಪ್ರತಿಭಟನೆ ಮೂಲಕ ಸರಕಾರದ ಗಮನ ಸೆಳೆಯಿಲಾಗಿತ್ತು.ಆದರೆ ಇಂದಿಗೂ ಸಿದ್ಧಿ ಸಮಾಜವನ್ನು ಬಿಟ್ಟು ಇನ್ನಾವ ಸಮಾಜವು ಪರಿಶಿಷ್ಟ ವರ್ಗಕ್ಕೆ ಸೇರದಿರುವುದು ವಿಷಾದಕರ ಎಂದು ಅವರು ವಿಷಾದಿಸಿದ್ದಾರೆ.

ವಿಶೇಷ ಕಾರ್ಯ:
ಮೀಸಲಾತಿ ವಂಚಿತ ಸಮಾಜದ ಅಧ್ಯಯನ, ಜಾತಿಯ ಮೂಲ, ಸಂಶೋಧನೆ ಸಂಪ್ರದಾಯ ಮತ್ತು ಸ್ಥಿತಿ-ಗತಿಗಳ ಕುರಿತು ಸರ್ವೇ ಮಾಡಿಸಿ, ಮೀಸಲಾತಿ ಸೌಲಭ್ಯ ವಂಚಿತ ಸಮಾಜಕ್ಕೆ ಸಾಮಾಜಿಕ ನ್ಯಾಯ ಕೊಟ್ಟಿರುವುದು, ನಾಲ್ಕು ದಶಕದ ಸಾಮಾಜಿಕ ಹೋರಾಟದ ವಿಶೇಷ ಕಾರ್ಯವಾಗಿದೆ ಎಂದು ರವೀಂದ್ರ ನಾಯ್ಕ ಹೇಳಿದರು.

Share This
300x250 AD
300x250 AD
300x250 AD
Back to top