Slide
Slide
Slide
previous arrow
next arrow

ನಿವೃತ್ತ ಶಿಕ್ಷಕಿ ಸುಜಾತಾ.ವಿ‌.ನಾಯ್ಕ‌ರಿಗೆ ಬೀಳ್ಕೊಡುಗೆ

300x250 AD

ಹಳಿಯಾಳ: ತಾಲೂಕಿನ ಡೋಮಗೇರಾದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಳೆದ ಅನೇಕ ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾದ ಸುಜಾತಾ.ವಿ‌.ನಾಯ್ಕ‌ ಬೀಳ್ಕೊಡುಗೆ ಸಮಾರಂಭವನ್ನು ಗುರುವಾರ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮಕ್ಕೆ ಮುನ್ನ ತೆರೆದ ವಾಹನದಲ್ಲಿ ಸುಜಾತಾ.ವಿ.ನಾಯ್ಕ ದಂಪತಿಗಳನ್ನು ಮೆರವಣಿಗೆಯ ಮೂಲಕ ಶಾಲೆಗೆ ಕರೆತರಲಾಯಿತು. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯು ಸಂಚರಿಸಿತು. ನಿವೃತ್ತ ಶಿಕ್ಷಕಿ ಸುಜಾತಾ.ವಿ.ನಾಯ್ಕ ದಂಪತಿಗಳನ್ನು ಶಾಲಾಭಿವೃದ್ಧಿ ಸಮಿತಿ ಹಾಗೂ ಊರ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳ ಪರವಾಗಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಜಾತಾ.ವಿ‌.ನಾಯ್ಕ‌ ಇಷ್ಟು ವರ್ಷಗಳ ಸುದೀರ್ಘ ಸೇವೆ ಸಲ್ಲಿಸಲು ಮಾರ್ಗದರ್ಶನವನ್ನು ನೀಡಿ ಪ್ರೋತ್ಸಾಹಿಸಿದ ಇಲಾಖೆಯ ಮೇಲಾಧಿಕಾರಿಗಳಿಗೆ, ಸಹಕರಿಸಿದ ಸಹೋದ್ಯೋಗಿಗಳಿಗೆ, ಶಿಕ್ಷಕ ವೃಂದದವರಿಗೆ, ಶಿಕ್ಷಕರ ಸಂಘದ ಪದಾಧಿಕಾರಿಗಳಿಗೆ, ಸದಸ್ಯರಿಗೆ ಮತ್ತು ಶಾಲಾಭಿವೃದ್ಧಿ ಸಮಿತಿ ಹಾಗೂ ಊರ ಗ್ರಾಮಸ್ಥರಿಗೆ ಅಭಿಮಾನದ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ವಿದ್ಯಾರ್ಥಿಗಳು ನೀಡಿದ ಮಮತೆಯ ಪ್ರೀತಿ ಸದಾ ಸ್ಮರಣೀಯ. ಶಿಕ್ಷಕಿಯಾಗಿ ಮಹೋನ್ನತ ಸೇವೆಯನ್ನು ಸಲ್ಲಿಸಲು ಅವಕಾಶ ದೊರೆತಿರುವುದು ನನ್ನ ಪೂರ್ವ ಜನ್ಮದ ಪುಣ್ಯದ ಫಲ ಎಂದರು. ವೃತ್ತಿಗೆ ನಿವೃತ್ತಿಯಾದರೂ ಪ್ರೀತಿ, ಅಭಿಮಾನ, ಪರಸ್ಪರ ಆತ್ಮೀಯತೆ, ಸೌಹಾರ್ದತೆ ಸದಾ ಕಾಲ ಹಸಿರಾಗಿ ಉಳಿಯಲಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಶಿಕ್ಷಕರ ಸಂಘದ ಅಧ್ಯಕ್ಷರಾದ ಸತೀಶ್ ನಾಯ್ಕ್ ಭಾವಿಕೇರಿ,ಸುಜಾತಾ.ವಿ‌.ನಾಯ್ಕ‌ ಮಾತೃ ವಾತ್ಸಲ್ಯದ ಗುರುಮಾತೆಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಅವರ ಸೇವೆ ಸದಾ ಸ್ಮರಣೀಯ ಎಂದರು.

300x250 AD

ಶಿಕ್ಷಕರ ಸಂಘದ ಕಾರ್ಯದರ್ಶಿ ಉದಯ ನಾಯ್ಕ, ಗ್ರಾಮದ ಪ್ರಮುಖರಾದ ಸುಭಾಷ್ ಗೌಡ ಹಾಗೂ ತುಕಾರಾಮ ತೋರ್ಲೇಕರ್, ಹಳೆ ವಿದ್ಯಾರ್ಥಿಗಳಾದ ಶಿವಾನಂದ ಮಿಟಗಿ, ಗೋವಿಂದ ಕದಂ, ವಿನಾಯಕ ಚಲವಾದಿ, ಅಶ್ವಿನಿ, ಕಮಲಾ, ನಂದಾ, ಸುವರ್ಣಾ ಮೊದಲಾದವರು ಸಂದರ್ಭೋಚಿತವಾಗಿ ಮಾತನಾಡಿ ನಿವೃತ್ತ ಜೀವನಕ್ಕೆ ಶುಭವನ್ನು ಕೋರಿದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದದವರು, ಶಿಕ್ಷಕರ ಸಂಘದ ಪದಾಧಿಕಾರಿಗಳು, ಸದಸ್ಯರು, ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಊರ ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು‌. ಜೇಮ್ಸ್ ಡಿಸೋಜಾ ಸ್ವಾಗತಿಸಿ, ವಂದಿಸಿದ ಕಾರ್ಯಕ್ರಮವನ್ನು ಆನಂದ ತೋರಲೆಕರ್ ನಿರೂಪಿಸಿದರು.

Share This
300x250 AD
300x250 AD
300x250 AD
Back to top